ಏರಿಂಡಿಯಾ ಗ್ರೌಂಡ್ ಸ್ಟಾಫ್ ಮುಷ್ಕರ: ಹಲವು ವಿಮಾನ ಹಾರಾಟ ವಿಳಂಬ
Team Udayavani, Nov 8, 2018, 11:23 AM IST
ಮುಂಬಯಿ : ಇಲ್ಲಿನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಏರಿಂಡಿಯಾ ಗ್ರೌಂಡ್ ಸ್ಟಾಫ್ ಮುಷ್ಕರ ಹೂಡಿರುವ ಪರಿಣಾಮವಾಗಿ ಇಲ್ಲಿಂದ ಇಂದು ವಿವಿಧ ತಾಣಗಳಿಗೆ ಹಾರಲಿದ್ದ ಹಲವು ಏರಿಂಡಿಯಾ ವಿಮಾನಗಳ ಹಾರಾಟ ವಿಳಂಬಗೊಂಡಿರುವುದಾಗಿ ವರದಿಯಾಗಿದೆ.
ಕಳೆದ ಬುಧವಾರ ರಾತ್ರಿಯಿಂದ ಏರಿಂಡಿಯಾ ಏರ್ ಟ್ರಾನ್ಸ್ ಪೋರ್ಟ್ ಸರ್ವಿಸಸ್ ಲಿಮಿಟೆಡ್ (ಎಐಎಟಿಎಸ್ಎಲ್) ನ ಗುತ್ತಿಗೆ ಗ್ರೌಂಡ್ ಸ್ಟಾಫ್ ಮುಷ್ಕರ ನಿರತರಾಗಿದ್ದಾರೆ.
ಈ ನಡುವೆ ಎಎನ್ಐ ಸುದ್ದಿ ಸಂಸ್ಥೆಗೆ ನೀಡಿರುವ ಹೇಳಿಕೆಯೊಂದರಲ್ಲಿ ಏರಿಂಡಿಯಾ “ವಿಮಾನ ಹಾರಾಟಗಳನ್ನು ಮಾಮೂಲಿ ಸ್ಥಿತಿಗೆ ತರುವಲ್ಲಿ ಕಾಯಂ ಸಿಬಂದಿಗಳನ್ನು ನಿಯೋಜಿಸಲಾಗಿದೆ’ ಎಂದು ಹೇಳಿದೆ. ಮುಂಬಯಿಂದ ಇಂದು ನಸುಕಿನ ವೇಳೆ ಹೊರಡಬೇಕಿದ್ದ ಏರಿಂಡಿಯಾದ ವಿಮಾನಗಳ ಹಾರಾಟ ಎರಡು ತಾಸು ವಿಳಂಬವಾಗಿದೆ ಎಂದು ಪ್ರಕಟನೆಯಲ್ಲಿ ಹೇಳಿದೆ.
ನಾವು ವಾಸ್ತವತೆಯನ್ನು ಪರಿಶೀಲಿಸುತ್ತಿದ್ದೇವೆ; ವಿಮಾನ ಹಾರಾಟದಲ್ಲಿನ ವಿಳಂಬ ಮತ್ತು ಅಡಚಣೆಗಳನ್ನು ಕನಿಷ್ಠ ಗೊಳಿಸುವ ಎಲ್ಲ ಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಏರಿಂಡಿಯಾ ವಕ್ತಾರ ಎಎನ್ಐ ಜತೆಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ