ವಾಯುಪಡೆ ಮುಖ್ಯಸ್ಥರಾಗಿ ಏರ್ ಮಾರ್ಷಲ್ ವಿ.ಆರ್. ಚೌಧರಿ ನೇಮಕ
Team Udayavani, Sep 21, 2021, 9:35 PM IST
ನವದೆಹಲಿ: ಭಾರತೀಯ ವಾಯುಪಡೆ (ಐಎಎಫ್) ಮುಖ್ಯಸ್ಥರಾಗಿ ಏರ್ ಮಾರ್ಷಲ್ ವಿ.ಆರ್. ಚೌಧರಿ ಅವರು ನೇಮಕವಾಗಿದ್ದಾರೆ. ಈವರೆಗೆ ಈ ಹುದ್ದೆಯಲ್ಲಿದ್ದ ಆರ್.ಕೆ.ಎಸ್. ಬಧೌರಿಯಾ ಅವರು ಸೆ. 30ರಂದು ನಿವೃತ್ತಿಯಾಗಲಿದ್ದಾರೆ. ಅವರ ಸ್ಥಾನಕ್ಕೆ ಚೌಧರಿ ನೇಮಕವಾಗಿದ್ದಾರೆ.
1982ರ ಡಿ. 29ರಂದು ವಾಯುಪಡೆಗೆ ಸೇರ್ಪಡೆಗೊಂಡಿದ್ದ ಅವರು, ಯುದ್ಧ ವಿಮಾನಗಳನ್ನು ನಿರ್ವಹಿಸುತ್ತಿದ್ದರು. ಆನಂತರ, ವಾಯುಪಡೆಯ ಸಿಬ್ಬಂದಿ ಮುಖ್ಯಸ್ಥರಾಗಿ, ವಿವಿಧ ಹಂತಗಳ ನೇಮಕಾತಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವಾಯುಪಡೆಯ ಉಪಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಚೌಧರಿ, ಮಿಗ್-29 ಯುದ್ಧವಿಮಾನದ ನಿಪುಣ ಪೈಲಟ್ ಎಂದೇ ಹೆಸರಾದವರು. ಆಗಸ್ಟ್ 1, 2020ರಿಂದಲೂ ಅವರು ಪಶ್ಚಿಮ ಏರ್ ಕಮಾಂಡ್ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡಿಸೆಂಬರ್ 29, 1982ರಂದು ಫೈಟರ್ ಪೈಲಟ್ ಆಗಿ ನಿಯೋಜಿತರಾದ ಚೌಧರಿ 39 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ 3800 ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ. ಭಾರತ ಸರ್ಕಾರದ ರಕ್ಷಣಾ ಇಲಾಖೆಯ ವಕ್ತಾರರು ಏರ್ ಮಾರ್ಷಲ್ ವಿವೇಕಾ ರಾಮ್ ಚೌಧರಿ ಅವರ ಪದೋನ್ನತಿಯನ್ನು ದೃಢಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು
IPL;ಮುಂಬೈ ಇಂಡಿಯನ್ಸ್ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ