Udayavni Special

ನಿಲ್ಲದ ವಾಯು ಮಾಲಿನ್ಯ : ದಿಲ್ಲಿ ಸರಕಾರಕ್ಕೆ 25 ಕೋಟಿ ರೂ. NGT ದಂಡ


Team Udayavani, Dec 3, 2018, 3:38 PM IST

delhi-air-quality-700.jpg

ಹೊಸದಿಲ್ಲಿ : ನಗರದಲ್ಲಿನ ವಾಯು ಮಾಲಿನ್ಯ ಪೀಡೆಯನ್ನು ತಡೆಯುವಲ್ಲಿ ವಿಫ‌ಲವಾಗಿರುವ ದಿಲ್ಲಿ ಸರಕಾರಕ್ಕೆ ರಾಷ್ಟ್ರೀಯ ಹಸಿರು ಮಂಡಳಿ (NGT) ಇಂದು ಸೋಮವಾರ 25 ಕೋಟಿ ರೂ. ದಂಡ ವಿಧಿಸಿದೆ.

ಈ ದಂಡವನ್ನು ದಿಲ್ಲಿ ಸರಕಾರದ ಅಧಿಕಾರಿಗಳ ಸಂಬಳದಿಂದ ಮತ್ತು ವಾಯು ಮಾಲಿನ್ಯ ಎಸಗುತ್ತಿರುವ ಜನರಿಂದ ವಸೂಲಿ ಮಾಡಿ ಪಾವತಿಸಬೇಕು; ಇದಕ್ಕೆ ವಿಫ‌ಲವಾದಲ್ಲಿ ದಿಲ್ಲಿ ಸರಕಾರ ಪ್ರತೀ ತಿಂಗಳೂ ಹತ್ತು ಕೋಟಿ ರೂ. ದಂಡವನ್ನು ಪಾವತಿಸಬೇಕಾಗುವುದು ಎಂದು ಎನ್‌ಜಿಟಿ ಹೇಳಿದೆ.

ದಿಲ್ಲಿ ಮಾತ್ರವಲ್ಲದೆ ಆಸುಪಾಸಿನ ಗುರುಗ್ರಾಮ, ನೋಯ್ಡಾ, ಫ‌ರೀದಾಬಾದ್‌ ಮತ್ತು ಗಾಜಿಯಾಬಾದ್‌ ನ ಜನರು ವಿಶ್ವ ಆರೋಗ್ಯ ಸಂಸ್ಥೆಯ ನಿಗದಿಸಿರುವ ಸುರಕ್ಷಿತ ಮಟ್ಟಕ್ಕಿಂತ ಎಷ್ಟೋ ಅಧಿಕ ಮಟ್ಟದ ಅಸುರಕ್ಷಿತ ಗಾಳಿಯನ್ನು ಸೇವಿಸುತ್ತಿದ್ದಾರೆ. ಕಳೆದ ಅನೇಕ ವಾರಗಳಿಂದ ರಾಷ್ಟ್ರ ರಾಜಧಾನಿ ವಲಯದ ಹೆಚ್ಚಿನ ಭಾಗಗಳ ಜನರು 2.5 ಪಿಎಂ ಮಟ್ಟಕ್ಕಿಂತ 300 ಪಟ್ಟು ಹೆಚ್ಚು  (ಇದು 60ರ ಸುರಕ್ಷಿತ ಮಟ್ಟಕ್ಕಿಂತ ಹಲವು ಪಟ್ಟ ಅಧಿಕ) ಅಸುರಕ್ಷಿತ ಗಾಳಿಯನ್ನು ಸೇವಿಸುತ್ತಿದ್ದಾರೆ.

ವಾಯು ಮಾಲಿನ್ಯ ನಿಯಂತ್ರಣ ಅಥವಾ ತಡೆಗೆ ಬಹಳಷ್ಟು ಚರ್ಚೆ, ವಿಶ್ಲೇಷಣೆ, ಸಲಹೆ ಸೂಚನೆಗಳು ಕೇಳಿ ಬಂದಿರುವ ಹೊರತಾಗಿಯೂ ಪ್ರಾಥಮಿಕ ಮಟ್ಟದಲ್ಲಿ ಯಾವುದೇ ಕೆಲಸ ಈ ವರೆಗೂ ನಡೆದಿಲ್ಲ. ಇದರಿಂದ ವಾಯು ಮಾಲಿನ್ಯ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೆ ಇದೆ. ರಾಜಕೀಯ ಪಕ್ಷಗಳು ಕೇವಲ ಆರೋಪ-ಪ್ರತ್ಯಾರೋಪಗಳ ಕೆಸರೆರೆಚಾಟದಲ್ಲಿ ತೊಡಗಿವೆ ಎಂದು ವರದಿಗಳು ತಿಳಿಸುತ್ತವೆ. 

ದಿಲ್ಲಿ ವಾಯ ಮಾಲಿನ್ಯ ಸಮಸ್ಯೆ ಈ ಮಟ್ಟಕ್ಕೇರಲು ನಿಷ್ಕ್ರಿಯ ಅರವಿಂದ ಕೇಜ್ರಿವಾಲ್‌ ಸರಕಾರವೇ ಕಾರಣ ಎಂದು ಬಿಜೆಪಿಯ ದಿಲ್ಲಿ ಮುಖ್ಯಸ್ಥ ಮನೋಜ್‌ ತಿವಾರಿ ಹೇಳುತ್ತಾರೆ. 

ಆದರೆ ವಾಯು ಮಾಲಿನ್ಯ ಸಮಸ್ಯೆ ಬಿಗಡಾಯಿಸಲು ದಿಲ್ಲಿ ಆಸುಪಾಸಿನ ಪ್ರದೇಶಗಳಲ್ಲಿನ ರೈತರು ಬೆಳೆ ಅವಶೇಷಗಳಿಗೆ ಬೆಂಕಿ ಕೊಡುತ್ತಿರುವುದೇ ಕಾರಣ ಎಂದು ಕೇಜ್ರಿವಾಲ್‌ ಹೇಳಿದ್ದಾರೆ. ಈಗ ಬೆಳೆ ಅವಶೇಷ ಸುಡುವ ಋತು ಮುಗಿದಿರುವ ಕಾರಣ ಜನರು ರಾಜಧಾನಿಯಲ್ಲಿನ ವಾಯು ಮಟ್ಟ ಕಳಪೆಯಾಗಿರುವುದಕ್ಕೆ ಏನು ಕಾರಣ ಎಂದು ಜನರು ದಿಲ್ಲಿ ಸಿಎಂ ಅವರನ್ನೇ ಪ್ರಶ್ನಿಸುತ್ತಿದ್ದಾರೆ. 

ಟಾಪ್ ನ್ಯೂಸ್

gfjhgfds

ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆ ಬಗ್ಗೆ ಶೀಘ್ರವೇ ತೀರ್ಮಾನ : ಸಿಎಂ

hfgjhgfds

ಕಟಪಾಡಿ : ಭತ್ತ ಕಟಾವು ಯಂತ್ರ ಗಂಟೆಗೆ 2500 ರೂ : ಬೇಸತ್ತ ರೈತರು

fhgfd

ಇಂದು ಕೊಹ್ಲಿ ಪಡೆಗೆ ಕೊನೆಯ ಅಭ್ಯಾಸ ಪಂದ್ಯ

gjkjhgfd

ಸೋಶಿಯಲ್‌ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಭಾಷಣ!

1111111111111

ಉತ್ತರಾಖಂಡದಲ್ಲಿ ಮೇಘಸ್ಪೋಟ : 34 ಮಂದಿ ಸಾವು, ಹಲವರು ನಾಪತ್ತೆ  

rwytju11111111111

ಬುಧವಾರದ ರಾಶಿಫಲ : ಹೇಗಿದೆ ನಿಮ್ಮ ಗ್ರಹಬಲ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1111111111111

ಉತ್ತರಾಖಂಡದಲ್ಲಿ ಮೇಘಸ್ಪೋಟ : 34 ಮಂದಿ ಸಾವು, ಹಲವರು ನಾಪತ್ತೆ  

ಹಳೆ ತಂತ್ರಗಾರಿಕೆ ಬದಲಿಸಿದ ಪಾಕ್‌

ಹಳೆ ತಂತ್ರಗಾರಿಕೆ ಬದಲಿಸಿದ ಪಾಕ್‌

ಕೇರಳ, ತಮಿಳುನಾಡಿನಲ್ಲಿ ಇಂದಿನಿಂದ ಭಾರೀ ಮಳೆ

ಕೇರಳ, ತಮಿಳುನಾಡಿನಲ್ಲಿ ಇಂದಿನಿಂದ ಭಾರೀ ಮಳೆ

ರಣವೀರ್‌ ಸಿಂಗ್‌ನಂತೆ ಕಲರ್‌ಫುಲ್ ಆದ ಕಪಿಲ್‌ ದೇವ್‌!

ರಣವೀರ್‌ ಸಿಂಗ್‌ನಂತೆ ಕಲರ್‌ಫುಲ್ ಆದ ಕಪಿಲ್‌ ದೇವ್‌!

ಚಿನ್ನದ ನಾಣ್ಯ: ಮಾಲೀಕನಿಗೆ ಒಪ್ಪಿಸಿದ ಕೂಲಿಯಾಳು!

ಚಿನ್ನದ ನಾಣ್ಯ: ಮಾಲೀಕನಿಗೆ ಒಪ್ಪಿಸಿದ ಕೂಲಿಯಾಳು!

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

gfjhgfds

ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆ ಬಗ್ಗೆ ಶೀಘ್ರವೇ ತೀರ್ಮಾನ : ಸಿಎಂ

hfgjhgfds

ಕಟಪಾಡಿ : ಭತ್ತ ಕಟಾವು ಯಂತ್ರ ಗಂಟೆಗೆ 2500 ರೂ : ಬೇಸತ್ತ ರೈತರು

fhgfd

ಇಂದು ಕೊಹ್ಲಿ ಪಡೆಗೆ ಕೊನೆಯ ಅಭ್ಯಾಸ ಪಂದ್ಯ

gjkjhgfd

ಸೋಶಿಯಲ್‌ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಭಾಷಣ!

1111111111111

ಉತ್ತರಾಖಂಡದಲ್ಲಿ ಮೇಘಸ್ಪೋಟ : 34 ಮಂದಿ ಸಾವು, ಹಲವರು ನಾಪತ್ತೆ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.