ಲೈಂಗಿಕ ಉದ್ದೇಶವಲ್ಲದ ಹಲ್ಲೆ ಕಿರುಕುಳವಲ್ಲ
Team Udayavani, Nov 3, 2017, 7:55 AM IST
ಹೊಸದಿಲ್ಲಿ: ಮಹಿಳೆಯರ ಮೇಲಾಗುವ “ಲೈಂಗಿಕ ಉದ್ದೇಶ’ವಿಲ್ಲದ ಹಲ್ಲೆ, ನೂಕಾಟ, ತಳ್ಳಾಟಗಳನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿರುವ ದಿಲ್ಲಿ ಹೈಕೋರ್ಟ್ ಹೊಸತೊಂದು ಚರ್ಚೆಗೆ ನಾಂದಿ ಹಾಡಿದೆ.
ಮಹಿಳೆಯೊಬ್ಬರು 2005ರಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ಹೂಡಿದ್ದರು. ಆದರೆ, ಅದರಲ್ಲಿ ಆತನಿಗೆ ಕ್ಲೀನ್ ಚಿಟ್ ಸಿಕ್ಕಿದ್ದನ್ನು ದಿಲ್ಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, ಜಗಳದ ವೇಳೆ ಆಗುವ ನೂಕಾಟಗಳು ಅಸಂಬದ್ಧ “ದೈಹಿಕ ಸ್ಪರ್ಶ’ ಒಳ ಗೊಂಡರೂ ಬಹುಪಾಲು ಲೈಂಗಿಕ ಉದ್ದೇಶ ಹೊಂದಿರಲ್ಲ. ಹಾಗಾಗಿ, ಅಂಥ ಹಲ್ಲೆಗಳನ್ನು ಲೈಂಗಿಕ ಕಿರುಕುಳಗಳ ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲ ಎಂದಿದೆ.