ಇನ್ನು ರೈಲಿನಲ್ಲೂ ಅಮೆಜಾನ್‌ ಪಾರ್ಸೆಲ್‌ ಸಾಗಾಟ

Team Udayavani, Oct 22, 2019, 5:03 PM IST

ಹೊಸದಿಲ್ಲಿ: ಪ್ರಯಾಣಿಕರ ಟಿಕೆಟ್‌ನಿಂದ ಹೊರತಾಗಿ ವಿವಿಧ ಮೂಲಗಳಿಂದ ಆದಾಯ ವೃದ್ಧಿಗೆ ಮುಂದಾಗಿರುವ ಭಾರತೀಯ ರೈಲ್ವೇ ಈಗ ರೈಲುಗಳಲ್ಲಿ ಅಮೆಜಾನ್‌ ಪಾರ್ಸೆಲ್‌ ಸಾಗಾಟಕ್ಕೆ ಮುಂದಾಗಿದೆ.

ಈ ಬಗ್ಗೆ ಒಪ್ಪಂದಕ್ಕೆ ಮುಂದಾಗಿದೆ. ಮುಂದಿನ ಮೂರು ತಿಂಗಳ ಕಾಲ ಪ್ರಾಯೋಗಿಕ ನೆಲೆಯಲ್ಲಿ ದಟ್ಟನೆ ಇಲ್ಲದ ಸಂದರ್ಭಗಳಲ್ಲಿ ರೈಲುಗಳಲ್ಲಿ ಅಮೆಜಾನ್‌ ಪಾರ್ಸೆಲ್‌ಗ‌ಳನ್ನು ಸಾಗಿಸಲಾಗುತ್ತದೆ. ಪೂರ್ವ ರೈಲ್ವೇಯ ಸೆಲ್ದಾ ಮತ್ತು ದಂಕುನಿ ಮಧ್ಯೆ ಇ-ಕಾಮರ್ಸ್‌ ವೆಬ್‌ಸೈಟ್‌ಗಳ ಪಾರ್ಸೆಲ್‌ ಸಾಗಿಸಲು ಉದ್ದೇಶಿಸಲಾಗಿದೆ. ದಿನಕ್ಕೆ ಒಟ್ಟು 7 ಮೆಟ್ರಿಕ್‌ ಟನ್‌ನಷ್ಟು ಪಾರ್ಸೆಲ್‌ ಸಾಗಿಸಲು ಅನುಮತಿ ಕಲ್ಪಿಸಲಾಗುವುದು. ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಈ ಪಾರ್ಸೆಲ್‌ಗ‌ಳನ್ನು ರೈಲುಗಳಲ್ಲಿ ಸಾಗಿಸಲು ಅನುಮತಿ ಕಲ್ಪಿಸಲಾಗುತ್ತದೆ.

ಹೆಚ್ಚುವರಿ ಯಾವುದೇ ಸೌಕರ್ಯಗಳಿಲ್ಲದೆ ಇ ಕಾಮರ್ಸ್‌ ವೆಬ್‌ ಗೆ ಈ ವ್ಯವಸ್ಥೆ ಕಲ್ಪಿಸುವುದರಿಂದ ರೈಲ್ವೇಗೆ ಲಾಭವಾಗಲಿದೆ. ಅಲ್ಲದೆ ಮಾರಾಟಗಾರರಿಗೆ ಕಡಿಮೆ ಅವಧಿಯಲ್ಲಿ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಸಾಧ್ಯವಾಗಲಿದೆ. ಪ್ರಯೋಗಿಕ ಯೋಜನೆಯ ಯಶಸ್ಸಿನ ಆಧಾರದ ಮೇಲೆ ಇತರ ಮಾರ್ಗಗಳಲ್ಲೂ ಪಾರ್ಸೆಲ್‌ ಸಾಗಾಟಕ್ಕೆ ರೈಲ್ವೇ ತೀರ್ಮಾನ ಕೈಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ