Ambani ಪುತ್ರನ ಅದ್ದೂರಿ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ನೃತ್ಯ, ಸಂಗೀತ ಧಾರೆ
"ಅನಂತ' ಸಮಾರಂಭಕ್ಕೆ ತಾರೆಯರ ದಂಡು
Team Udayavani, Mar 4, 2024, 8:36 AM IST
ಗಾಂಧೀನಗರ: ಉದ್ಯಮಿ ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂ ಟ್ ಅವರ ವಿವಾಹ ಪೂರ್ವ ಸಮಾರಂಭ ಅದ್ದೂರಿಯಾಗಿ ಪೂರ್ಣ ಗೊಂಡಿದೆ. ನಟ ಅಮಿತಾಭ್ ಬಚ್ಚನ್, ಸೂಪರ್ಸ್ಟಾರ್ ರಜಿನಿಕಾಂತ್ ಸಹಿತ ಸಿನೆಮಾರಂಗದ ದಿಗ್ಗಜ್ಜರು ಪಾಲ್ಗೊಂಡಿದ್ದಾರೆ. ವಿವಾಹಪೂರ್ವ ಸಮಾ ರಂಭಕ್ಕೆಂದೇ 1,000 ಕೋಟಿ ರೂ. ವೆಚ್ಚ ವಾಗಿದೆ. ಕಾರ್ಯ ಕ್ರಮಕ್ಕೆ ದೇಶ ವಿದೇಶ ಗಳ ಹಲವಾರು ಗಾಯಕರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಅಂಬಾನಿ ದಂಪತಿ ನೃತ್ಯ
ಮುಕೇಶ್ ಅಂಬಾನಿ ಅವರು ಪತ್ನಿ ನೀತಾ ಜತೆಗೆ ಭರ್ಜರಿ ಸ್ಟೆಪ್ಸ್ ಹಾಕಿ ಸಮಾರಂಭಕ್ಕೆ ಆಗಮಿಸಿದ್ದ ಅತಿಥಿ ಗಳನ್ನು ರಂಜಿಸಿದ್ದಾರೆ.”ಪ್ಯಾರ್ ಹುವಾ, ಇಕ್ರಾರ್ ಹುವಾ’ ಹಾಡಿಗೆ ಹೆಜ್ಜೆ ಹಾಕಿ, ಕೊಳಲು ನುಡಿಸಿದ ಅಂಬಾನಿ ಯನ್ನು ನೀತಾ ಅವರು ಆಲಂಗಿಸಿ ನೃತ್ಯದ ಮೆರುಗು ಹೆಚ್ಚಿಸಿದ್ದಾರೆ.
ಖಾನ್ತ್ರಯರ ನಾಟು
ಜನಪ್ರಿಯ ಸಿನೆಮಾ “ಆರ್ಆರ್ಆರ್’ ನ ನಾಟು ನಾಟು ಹಾಡಿಗೆ ಖಾನ್ ತ್ರಯರಾದ ಸಲ್ಮಾನ್ ಖಾನ್, ಶಾರುಖ್, ಆಮಿರ್ ಹೆಜ್ಜೆ ಹಾಕಿದ್ದಾರೆ. ಸಮಾರಂಭದಲ್ಲಿ ನೆರೆದಿದ್ದವರನ್ನು ಜೈ ಶ್ರೀರಾಮ್ ಎನ್ನುತ್ತಾ ಶಾರುಖ್ ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದು ಜಾಲತಾಣದಲ್ಲೂ ವೈರಲ್ ಆಗಿದೆ.
ಧೋನಿ “ದಾಂಡಿಯಾ’
ಈ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗ ಎಂ.ಎಸ್.ಧೋನಿಗೆ ಆಕಾಶ್ ಅಂಬಾನಿ ದಾಂಡಿಯಾ ನೃತ್ಯ ಕಲಿಸಿದ್ದಾರೆ. ಜತೆಗೆ ಅವರನ್ನು “ಭಾಯಿ’ ಎಂದು ಕರೆದಿದ್ದಾರೆ. ಸಚಿನ್ ತೆಂಡುಲ್ಕರ್, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ ಸೇರಿದಂತೆ ಇನ್ನಿತರ ಕ್ರಿಕೆಟಿಗರೂ ಭಾಗಿಯಾಗಿದ್ದಾರೆ.
ಇದನ್ನೂ ಓದಿ: IT ಪ್ಲಾಟ್ ಫಾರ್ಮ್ ಗಳಿಗೆ ಕೇಂದ್ರದ ಅನುಮತಿ ಕಡ್ಡಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ