ದಿಲ್ಲಿಗೆ ಶೀಘ್ರವೇ ವಿಶ್ವ ಮಟ್ಟದ ಇನ್ನೊಂದು ರೈಲು ನಿಲ್ದಾಣ
Team Udayavani, Feb 8, 2019, 11:26 AM IST
ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದಿಲ್ಲಿ ಶೀಘ್ರವೇ ವಿಶ್ವ ಮಟ್ಟದ ಇನ್ನೊಂದು ರೈಲು ನಿಲ್ದಾಣವನ್ನು ಪಡೆಯಲಿದೆ.
ರೈಲು ನಿಲ್ದಾಣಗಳ ಮರು ಅಭಿವೃದ್ದಿ ಕಾರ್ಯಕ್ರಮದಡಿ ದಿಲ್ಲಿಯ ಬಿಜ್ವಾಸಾನ್ ರೈಲು ನಿಲ್ದಾಣವನ್ನು ವಿಶ್ವ ದರ್ಜೆಗೇರಿಸಲು ಆಯ್ಕೆ ಮಾಡಲಾಗಿದೆ.
ಪ್ರಕೃತ ಬಿಜ್ವಾಸಾನ್ ರೈಲು ನಿಲ್ದಾಣ ಸ್ಥಳೀಯ ರೈಲುಗಳನ್ನು ನಿರ್ವಹಿಸುತ್ತಿದೆ. ಈ ರೈಲು ನಿಲ್ದಾಣವು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪವೇ ಇರುವುದರಿಂದ ಇದನ್ನು ವಿಶ್ವ ದರ್ಜೆಯ ರೈಲು ನಿಲ್ದಾಣವಾಗಿ ಅಭಿವೃದ್ದಿ ಪಡಿಸಿದರೆ ರೈಲು-ವಿಮಾನ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.
ಮೇಲಾಗಿ ಇದನ್ನು ದಿಲ್ಲಿ ಮೆಟ್ರೋ ಮೂಲಕ ನಗರದ ವಿವಿಧ ಪ್ರದೇಶಗಳಿಗೆ ಜೋಡಿಸುವುದು ಕೂಡ ಸುಲಭವಿರುತ್ತದೆ. ಈ ಎಲ್ಲ ಗುಣಾಂಶಗಳನ್ನು ಪರಿಗಣಿಸಿ ಈ ರೈಲು ನಿಲ್ದಾಣವನ್ನು ಅಂತಾರಾಷ್ಟ್ರೀಯ ದರ್ಜೆಗೇರಿಸಲಾಗುವುದು ಎಂದು ರೈಲ್ವೇ ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್