ಲೊಯೊಲಾ ಕಾಲೇಜಿನಲ್ಲಿ ಆಕ್ಷೇಪಾರ್ಹ ಕಲಾಕೃತಿ
Team Udayavani, Jan 22, 2019, 2:13 AM IST
ಚೆನ್ನೈ: ತಮಿಳುನಾಡಿನ ಚೆನ್ನೈಯಲ್ಲಿರುವ ಪ್ರತಿಷ್ಠಿತ ಲೊಯೊಲಾ ಕಾಲೇಜಿನಲ್ಲಿ ಭಾರತ ಮಾತೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಕುರಿತ ಅವಹೇಳನಕಾರಿ ಪೇಂಟಿಂಗ್ಗಳನ್ನು ಪ್ರದರ್ಶನ ಮಾಡಿರುವುದು ಈಗ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಬಿಜೆಪಿ ಮುಖಂಡರು ಈ ಬಗ್ಗೆ ಚೆನ್ನೈ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.
ಅಲ್ಟರ್ನೇಟಿವ್ ಮೀಡಿಯಾ ಸೆಂಟರ್ ಸಹಭಾಗಿತ್ವದಲ್ಲಿ ಸ್ಟ್ರೀಟ್ ಅವಾರ್ಡ್ ಫೆಸ್ಟಿವಲ್ ಅನ್ನು ಲೊಯೊಲಾ ಕಾಲೇಜು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದ ಅಡಿಯಲ್ಲಿ ಚಿತ್ರಕಲೆ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿತ್ತು. ಒಂದೇ ಸೂರಿನಡಿಯಲ್ಲಿ ಹಲವು ವಿಧದ ಕಲಾ ರೂಪಗಳ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಆಕ್ಮೆ ವಿಶ್ವ ದಾಖಲೆಯನ್ನು ಮೀರಿಸುವ ಉದ್ದೇಶದಿಂದ ಈ ಚಿತ್ರಕಲೆ ಹಮ್ಮಿಕೊಳ್ಳಲಾಗಿತ್ತು. ಈ ಪ್ರದರ್ಶನದಲ್ಲಿ ಜಾತಿ ಆಧಾರಿತ ಸಂಘರ್ಷಗಳು, ಲೈಂಗಿಕ ದೌರ್ಜನ್ಯ, ದಲಿತರ ಮೇಲೆ ದೌರ್ಜನ್ಯ ಸೇರಿದಂತೆ ಹಲವು ವಿಷಯಗಳ ಕುರಿತು ಕಲಾಕೃತಿಗಳು ಪ್ರದರ್ಶನಗೊಂಡಿವೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಮೀಟೂ ಚಳವಳಿಯಲ್ಲಿ ಭಾರತ ಮಾತೆ ಕೂಡ ಸಂತ್ರಸ್ತೆ ಎಂಬಂತೆ ಚಿತ್ರಿಸಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಹಿಂದೂ ಪರ ಸಂಘಟನೆಗಳು ಈ ಚಿತ್ರಗಳು ಆಕ್ಷೇಪಾರ್ಹವಾಗಿದ್ದು, ಇದು ಪ್ರಧಾನಿ, ಆರೆಸ್ಸೆಸ್ ಹಾಗೂ ಇತರ ಹಿಂದೂ ಸಂಘಟನೆಗಳನ್ನು ಅವಹೇಳನ ಉದ್ದೇಶವಾಗಿಸಿಕೊಂಡಿದೆ ಎಂದಿವೆ.
•ಕಲಾ ಪ್ರದರ್ಶನದಲ್ಲಿ ಭಾರತಮಾತೆಯನ್ನು ಮಿ ಟೂ ಸಂತ್ರಸ್ತೆಯಂತೆ ಚಿತ್ರಣ
•ಪೊಲೀಸರಿಗೆ ದೂರು ನೀಡಿದ ಬಿಜೆಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ