ಶಿಮ್ಲಾ: ಲೆಫ್ಟಿನೆಂಟ್ ಕರ್ನಲ್ ಪುತ್ರಿಯ ರೇಪ್: ಕರ್ನಲ್ ಸೆರೆ
Team Udayavani, Nov 23, 2017, 12:20 PM IST
ಶಿಮ್ಲಾ : ಇಲ್ಲಿನ ಆರ್ಮಿ ಟ್ರೇನಿಂಗ್ ಕಮಾಂಡ್ (ಆಆರ್ಟಿಎಸಿ) ನಲ್ಲಿ ನಿಯೋಜಿಸಲ್ಪಟ್ಟಿದ್ದ ಲೆಫ್ಟಿನೆಂಟ್ ಕರ್ನಲ್ ಓರ್ವರ ಪುತ್ರಿಯನ್ನು 56ರ ಹರೆಯದ ಆರ್ಮಿ ಕರ್ನಲ್ ಓರ್ವರು ರೇಪ್ ಮಾಡಿದ್ದು ಆರೋಪಿ ಅತ್ಯಾಚಾರಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
21ರ ಹರೆಯದ ಲೆಫ್ಟಿನೆಂಟ್ ಕರ್ನಲ್ ಅವರ ಪುತ್ರಿ ತನ್ನ ಮೇಲೆ ಅತ್ಯಾಚಾರ ಎಸಗಿದ ಆರ್ಮಿ ಕರ್ನಲ್ ವಿರುದ್ಧ ಪೊಲೀಸರಿಗೆ ದೂರು ನೀಡಿದ ಪ್ರಕಾರ ಆರೋಪಿ ಕರ್ನಲ್ ನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರಕ್ಕೆ ಗುರಿಯಾದ ಲೆ| ಕರ್ನಲ್ ಪುತ್ರಿಯ ಹೇಳಿಕೆಯನ್ನು ದಾಖಲಿಸಿಕೊಂಡು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಆರೋಪಿ ಅತ್ಯಾಚಾರಿ ವಿರುದ್ಧ ಪೊಲೀಸರು ಆರ್ಮಿ ಕರ್ನಲ್ನನ್ನು ಬಂಧಿಸಿ, ಎಫ್ಐಆರ್ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ಪೊಲೀಸ್ ಸುಪರಿಂಟೆಂಡೆಂಟ್ ಸೌಮ್ಯ ಸಾಂಬಶಿವನ್ ಅವರು ಈ ಪ್ರಕರಣದಲ್ಲಿ ಆರೋಪಿಯ ಬಂಧನ ಹಾಗೂ ಎಫ್ಐಆರ್ ದಾಖಲಾಗಿರುವುದನ್ನು ದೃಢೀಕರಿಸಿದ್ದಾರೆ. ಆದರೆ ಆರೋಪಿ ಕರ್ನಲ್ನ ಗುರುತು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.
ಅತ್ಯಾಚಾರ ಆರೋಪಿಯನ್ನು ಇಂದು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?