ಸಚಿವ ಭೂಪೇಂದ್ರ ಆಯ್ಕೆ ಅಸಿಂಧು
Team Udayavani, May 13, 2020, 9:54 AM IST
ಅಹಮದಾಬಾದ್: ಗುಜರಾತ್ ಸಚಿವ ಭೂಪೇಂದ್ರ ಸಿಂಗ್ ಅವರು ಚುದಾಸಮ ವಿಧಾನಸಭೆಗೆ ಆಯ್ಕೆಯಾಗಿರುವುದನ್ನು ಗುಜರಾತ್ ಹೈ ಕೋರ್ಟ್ ಅಸಿಂಧು ಎಂದು ಪ್ರಕಟಿಸಿದೆ. ಚುದಾಸಮಾ 2017ರ ವಿಧಾನಸಭಾ ಚುನಾವಣೆಯಲ್ಲಿ ದೋಲ್ಕಾ ಕ್ಷೇತ್ರದಿಂದ ಅಕ್ರಮ ಹಾಗೂ ಚುನಾವಣೆ ನೀತಿ ಸಂಹಿತೆಗಳನ್ನು ಉಲ್ಲಂಘಿಸಿ 327 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇವರ ಆಯ್ಕೆಯನ್ನು ಅಸಿಂಧು ಗೊಳಿಸಬೇಕು ಎಂದು ಕೋರಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಅರ್ಜಿ ಸಲ್ಲಿಸಿದ್ದರು. ಭೂಪೇಂದ್ರ ಸಿನ್ಹಾ ಚುದಾಸಮಾ ಶಿಕ್ಷಣ, ಕಾನೂನು, ಸಂಸದೀಯ ವ್ಯವಹಾರಗಳ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ.