ತಮಿಳುನಾಡಿಗೆ ಬಿಗ್ ಪವರ್ ವಿತ್ತೀಯ ಸಲಹಾ ಸಮಿತಿ
Team Udayavani, Jun 22, 2021, 7:00 AM IST
ಚೆನ್ನೈ: ತಮಿಳುನಾಡಿನ ಆರ್ಥಿಕ ಸಲಹಾ ಮಂಡಳಿಯನ್ನು ಪುನಾರಚಿಸಲಾಗಿದೆ. ಅದರಲ್ಲಿ ಆರ್‌ಬಿಐನ ಮಾಜಿ ಗವರ್ನರ್ ಡಾ|ರಘುರಾಮ್ ರಾಜನ್, ನೊಬೆಲ್ ಪುರಸ್ಕೃತ ಎಸ್ತರ್ ಡುಫ್ಲೋ, ಕೇಂದ್ರ ಸರಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯಂ, ಅಭಿವೃದ್ಧಿ ಅರ್ಥವ್ಯವಸ್ಥೆ ಪ್ರತಿಪಾದಕ ಜೀನ್ ಡ್ರೇಜ್ ಮತ್ತು ಕೇಂದ್ರ ವಿತ್ತ ಸಚಿವಾಲಯದ ನಿವೃತ್ತ ಕಾರ್ಯದರ್ಶಿ ಎಸ್.ನಾರಾಯಣ್ ಅವರನ್ನು ನೇಮಿಸಲಾಗಿದೆ.
ಅವರು ಸಿಎಂ ಎಂ.ಕೆ.ಸ್ಟಾಲಿನ್‌ಗೆ ವಿತ್ತೀಯ ವಿಚಾರ ಗಳಲ್ಲಿ ಸಲಹೆ ನೀಡಲಿದ್ದಾರೆ ಎಂದು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಪ್ರಕಟಿಸಿದ್ದಾರೆ.
ತಮಿಳು ನಾಡು ವಿಧಾನಸಭೆಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ವೇಳೆ ಅವರು ಈ ಅಂಶ ಪ್ರಸ್ತಾಪಿಸಿದ್ದಾರೆ. ಈ ಮಂಡಳಿ ನೀಡುವ ಸಲಹೆಯ ಆಧಾರದಲ್ಲಿ ರಾಜ್ಯ ಸರಕಾರ ಅರ್ಥ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮ ಪಡಿಸಲು ಕ್ರಮಗಳನ್ನು ಕೈಗೊಳ್ಳಲಿದೆ ಎಂದಿದ್ದಾರೆ. ಕೈಗಾರಿಕೋದ್ಯ ಮಿಗಳು, ಬ್ಯಾಂಕಿಂಗ್ ಮತ್ತು ವಿತ್ತೀಯ ಕ್ಷೇತ್ರದ ತಜ್ಞರನ್ನೊಳಗೊಂಡ ಸಮಿತಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ ಪುನರುತ್ಥಾನಕ್ಕೆ ಸಲಹೆ ನೀಡಲಿದೆ ಎಂದಿದ್ದಾರೆ ರಾಜ್ಯಪಾಲರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಆಸ್ಟ್ರೇಲಿಯದ ಆರೋನ್ ಫಿಂಚ್
ಬೆಳ್ತಂಗಡಿ: ಉಜಿರೆ ಲಾಡ್ಜ್ ಗಳ ಮೇಲೆ ಏಕಕಾಲದಲ್ಲಿ ಎಸ್.ಪಿ. ನೇತೃತ್ವದಲ್ಲಿ ದಾಳಿ
ಮಂಗಳವಾರದ ರಾಶಿ ಭವಿಷ್ಯ: ಈ ರಾಶಿ ಅವರಿಗಿಂದು ಗೃಹ ಆಸ್ತಿ ಸಂಬಂಧ ಚಿಂತೆ ಎದುರಾದೀತು
ಜೋಶಿ ಅವರು ದೇಶಸ್ಥರಲ್ಲ ಅವರು ಮಾಧ್ವ ಸಂಪ್ರದಾಯಕ್ಕೆ ಸೇರಿದವರು: ಅಶೋಕ್ ಹಾರನಹಳ್ಳಿ
ಸ್ಪಿನ್ ಎದುರಿಸುವುದೇ ಕಠಿನ ಸವಾಲು: ಉಸ್ಮಾನ್ ಖ್ವಾಜಾ