ಬಿಹಾರ ಸಿಎಂ ನಿತೀಶ್ ಕುಮಾರ್ ಆಸ್ತಿ 75 ಲಕ್ಷ ರೂ.!
Team Udayavani, Jan 2, 2023, 6:50 AM IST
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಆಸ್ತಿ ವಿವರವನ್ನು ಘೋಷಿಸಿದ್ದು, ಇದರ ಪ್ರಕಾರ ಅವರ ಬಳಿ 75.53 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅವರ ಆಸ್ತಿಯಲ್ಲಿ 18,000ರೂ. ಏರಿಕೆಯಾಗಿದೆ.
ನಿತೀಶ್ ಮತ್ತು ಅವರ ಸಂಪುಟ ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ಘೋಷಿಸಿದ್ದು, ಇದನ್ನು ಬಿಹಾರ ಸರ್ಕಾರದ ವೆಬ್ಸೈಟ್ನಲ್ಲಿ ಡಿ.31ರಂದು ಪ್ರಕಟಿಸಲಾಗಿದೆ. ಅದರಂತೆ, ನಿತೀಶ್ ಅವರ ಬಳಿ 28,135 ರೂ. ನಗದು ಹಾಗೂ ವಿವಿಧ ಬ್ಯಾಂಕ್ಗಳಲ್ಲಿ 51,856 ರೂ. ಠೇವಣಿ ಇಡಲಾಗಿದೆ. ಅವರ ಬಳಿ ಒಟ್ಟು 16.68 ಲಕ್ಷ ರೂ. ಮೌಲ್ಯದ ಚಿರಾಸ್ತಿ ಇದೆ. ಅಲ್ಲದೇ ನವದೆಹಲಿಯ ದ್ವಾರಕಾ ಸಹಕಾರಿ ವಸತಿ ಸಂಘದಲ್ಲಿ 58.85 ಲಕ್ಷ ರೂ. ಮೌಲ್ಯದ ಒಂದು ಫ್ಲ್ಯಾಟ್ ಇದೆ.
ಇದೇ ರೀತಿ ನಿತೀಶ್ ಅವರ ಸೂಚನೆಯಂತೆ ಬಿಹಾರ ಡಿಸಿಎಂ ತೇಜಸ್ವಿ ಪ್ರಸಾದ್ ಯಾದವ್, ಅವರ ಸಹೋದರ, ಪರಿಸರ ಸಚಿವ ತೇಜ್ ಪ್ರತಾಪ್ ಯಾದವ್ ಸೇರಿದಂತೆ ರಾಜ್ಯದ ಸಚಿವರು ತಮ್ಮ ಆಸ್ತಿ ವಿವರ ಘೋಷಿಸಿದ್ದಾರೆ. ತೇಜಸ್ವಿ ಬಳಿಕ 75 ಸಾವಿರ ರೂ. ನಗದು ಇದ್ದರೆ, ಅವರ ಪತ್ನಿ ರಾಜಶ್ರೀ ಬಳಿ 1.25 ಲಕ್ಷ ರೂ. ನಗದು ಇದೆ. ತೇಜ್ ಪ್ರತಾಪ್ 1.7 ಲಕ್ಷ ರೂ. ನಗದಿನ ಜೊತೆಗೆ 3.2 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು
IPL;ಮುಂಬೈ ಇಂಡಿಯನ್ಸ್ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ