ಭಾರತದಲ್ಲಿ 36 ಸಾವಿರ ರೊಹಿಂಗ್ಯಾಗಳು
Team Udayavani, Nov 30, 2017, 6:05 AM IST
ನವದೆಹಲಿ: ದೇಶದಲ್ಲಿ ಸುಮಾರು 36 ಸಾವಿರ ರೊಹಿಂಗ್ಯಾ ಮುಸ್ಲಿಮರಿದ್ದು, ಇವರಿಗೆ ಉಗ್ರ ಸಂಘಟನೆಗಳ ಜತೆ ಸಂಪರ್ಕ ಇರಬಹುದಾದ್ದರಿಂದ ಹದ್ದಿನ ಕಣ್ಣಿಡಲಾಗಿದೆ ಎಂದು ಗಡಿ ಭದ್ರತಾ ಪಡೆ ಹೇಳಿದೆ. ಕಳೆದ ಅಕ್ಟೋಬರ್ನಲ್ಲಿ 87 ರೊಹಿಂಗ್ಯಾ ಮುಸ್ಲಿಮರನ್ನು ಭಾರತ- ಬಾಂಗ್ಲಾ ಗಡಿಯಲ್ಲಿ ಬಂಧಿಸಲಾಗಿದೆ. ಈ ಪೈಕಿ 76 ಜನರನ್ನು ಬಾಂಗ್ಲಾಗೆ ವಾಪಸು ಕಳುಹಿಸಲಾಗಿದೆ. ದೇಶದ ವಿವಿಧ ಭಾಗಗಳಲ್ಲಿ 36 ಸಾವಿರ ರೊಹಿಂಗ್ಯಾ ಮುಸ್ಲಿಮರಿದ್ದಾರೆ ಎಂದು ತಿಳಿದುಬಂದಿದ್ದು, ಇದು ಇತರ ಏಜೆನ್ಸಿಗಳ ದತ್ತಾಂಶವನ್ನು ಆಧರಿಸಿ ಮಾಡಿದ ಲೆಕ್ಕಾಚಾರವಾಗಿದೆ.
ರೊಹಿಂಗ್ಯಾ ಮುಸ್ಲಿಮರು ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಅಥವಾ ಉಗ್ರರ ಜತೆ ಸಂಪರ್ಕ ಹೊಂದಿರುವ ನಿರ್ದಿಷ್ಟ ಪ್ರಕರಣಗಳು ಸಾಬೀತಾಗಿಲ್ಲ. ಆದರೆ ಸಂಪರ್ಕ ಇರುವ ಬಗ್ಗೆ ಭೀತಿ ಅತ್ಯಂತ ಗಂಭೀರವಾಗಿದೆ ಮತ್ತು ಇತರ ಏಜೆನ್ಸಿಗಳೂ ಈ ಬಗ್ಗೆ ನಮಗೆ ಮಾಹಿತಿ ನೀಡಿವೆ ಎಂದು ಬಿಎಸ್ಎಫ್ ಡಿಜಿ ಕೆ ಕೆ ಶರ್ಮಾ ಹೇಳಿದ್ದಾರೆ. ಬಾಂಗ್ಲಾ ಗಡಿಯ ಸಂಕೀರ್ಣ ಪ್ರದೇಶಗಳಲ್ಲಿ ವಿಚಕ್ಷಣೆ ತೀವ್ರಗೊಳಿಸಲಾಗಿದ್ದು, ಅಕ್ರಮ ಒಳನುಸುಳುವಿಕೆಯನ್ನು ತಡೆಯುವ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್
Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ
ಕಳ್ಳರು & ದರೋಡೆಕೋರರ ಗ್ಯಾಂಗ್ ಚುಚ್ಚಿದ್ದ ವಿಷಕ್ಕೆ ಪೊಲೀಸ್ ಕಾನ್ಸ್ ಟೇಬಲ್ ಮೃತ್ಯು
Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ
Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್ ಉತ್ಸುಕವಾಗಿದೆ: ಪ್ರಧಾನಿ ಮೋದಿ