ಗ್ಯಾಂಗ್ ರೇಪ್:ಆಯೋಧ್ಯೆಯ ಬಿಎಸ್ಪಿ ಅಭ್ಯರ್ಥಿ ವಿರುದ್ಧ ಎಫ್ಐಆರ್
Team Udayavani, Mar 5, 2017, 4:21 PM IST
ಲಕ್ನೋ: ಉತ್ತರಪ್ರದೇಶದಲ್ಲಿ ಒಂದು ಹಂತದ ಚುನಾವಣೆ ಬಾಕಿ ಉಳಿದಿರುವಾಗಲೇ ಪ್ರಮುಖ ವಿರೋಧ ಪಕ್ಷ ಬಿಎಸ್ಪಿ ಗೆ ಭಾರೀ ಅಘಾತವೆಂಬಂತೆ ಅಭ್ಯರ್ಥಿಯೊಬ್ಬರನ್ನು ಗ್ಯಾಂಗ್ ರೇಪ್ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಅಯೋಧ್ಯೆ ವಿಧಾನಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಬಜ್ಮಿ ಸಿದ್ಧಿಕಿ ಮತ್ತು 6 ಮಂದಿ ಬೆಂಬಲಿಗರ ವಿರುದ್ಧ ಮನೆಗೆ ನುಗ್ಗಿ ಗ್ಯಾಂಗ್ ರೇಪ್ ನಡೆಸಿರುವ ಕುರಿತು ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಈಗಾಗಲೇ 5 ಮಂದಿಯನ್ನು ವಶಕ್ಕೆ ಪಡೆದಿದ್ದು ಬಜ್ಮಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಇದು ನನ್ನ ವಿರುದ್ಧವಿರೋಧ ಪಕ್ಷಗಳು ನಡೆಸಿರುವ ಸಂಚು ಎಂದು ಬಜ್ಮಿ ಹೇಳಿದ್ದಾರೆ. ಬಜ್ಮಿ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.