BYJU’S ಈಗ ವೇತನ ಕೊಡಲೂ ಆರ್ಥಿಕ ಸಂಕಷ್ಟ!
Team Udayavani, Mar 3, 2024, 6:20 AM IST
ಹೊಸದಿಲ್ಲಿ: ಆನ್ಲೈನ್ ಕೋಚಿಂಗ್ ಸೆಂಟರ್ ಬೈಜೂಸ್ ಸಂಸ್ಥೆಯಲ್ಲಿ ಉದ್ಯೋಗಿಗಳಿಗೆ ವೇತನ ನೀಡಲು ಸಂಕಷ್ಟ ಎದುರಾಗಿದೆ.
ಇತ್ತೀಚೆಗೆ ಸಂಗ್ರಹಿಸಲಾದ ಹಣವನ್ನು ಕೆಲವು ಹೂಡಿಕೆದಾರರು ಭದ್ರಪಡಿಸಿರು ವ ಕಾರಣ ವೇತನ ಪಾವತಿ ಸಾಧ್ಯವಾಗು ತ್ತಿಲ್ಲ ಎಂದು ಕಂಪೆನಿ ಸ್ಥಾಪಕ ಬೈಜೂ ರವೀಂದ್ರನ್ ಹೇಳಿದ್ದಾರೆ.
ಈ ಕುರಿತಾಗಿ ಉದ್ಯೋಗಿಗಳಿಗೆ ಪತ್ರ ಬರೆದಿರುವ ರವೀಂದ್ರನ್, “ನಮ್ಮ ಉದ್ಯೋಗಿಗಳ ಅಗತ್ಯ ಪೂರೈಸಲು ಬೇಕಿರುವ ಹಣವನ್ನು ನಾವು ಹೊಂದಿ ದ್ದೇವೆ. ಆದರೂ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಮಾ.10ರೊಳಗೆ ಸಂಬಳ ಪಾವತಿಯಾಗುವುದನ್ನು ಖಚಿತ ಪಡಿಸಿಕೊಳ್ಳುತ್ತೇವೆ’ ಎಂದಿದ್ದಾರೆ.
ನಮ್ಮ 150 ಮಂದಿ ಹೂಡಿಕೆದಾರರಲ್ಲಿ ನಾಲ್ವರು ಹೃದಯಹೀನರಾಗಿದ್ದಾರೆ. ಅವರ ಸೂಚನೆ ಪ್ರಕಾರ ಸಂಗ್ರಹಿಸ ಲಾಗಿರುವ ಹಣವನ್ನು ಪ್ರತ್ಯೇಕ ಖಾತೆ ಯಲ್ಲಿ ಲಾಕ್ ಮಾಡಲಾಗಿದೆ. ಅಲ್ಲದೇ ಈ ಹೂಡಿಕೆದಾರರು ಈಗಾಗಲೇ ಗಣನೀಯ ಲಾಭವನ್ನು ಮಾಡಿಕೊಂಡಿ ದ್ದಾರೆ ಎಂದು ಆರೋಪಿಸಿದ್ದಾರೆ. ಬೈಜೂಸ್ನ ಕೆಲವು ಹೂಡಿಕೆದಾರರು ಮತ್ತು ಕಂಪೆನಿಯ ನಡುವೆ ಉಂಟಾಗಿ ರುವ ಕಾನೂನು ಬಿಕ್ಕಟ್ಟಿನಿಂದಾಗಿ ಕಂಪೆನಿ ಸಂಕಷ್ಟಕ್ಕೆ ಸಿಲುಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ