Live-in ಮುಸ್ಲಿಂ ಮಹಿಳೆ ರಕ್ಷಣೆ ಅಸಾಧ್ಯ: ಹೈ ಕೋರ್ಟ್
ಅಂಥ ಸಂಬಂಧವು ವ್ಯಭಿಚಾರ ಮತ್ತು ಹರಾಮ್ ಎನಿಸಿಕೊಳ್ಳುತ್ತದೆ
Team Udayavani, Mar 3, 2024, 6:30 AM IST
ಪ್ರಯಾಗರಾಜ್: ಲಿವ್-ಇನ್ ರಿಲೇಶನ್ಶಿಪ್ನಲ್ಲಿರುವ ವಿವಾಹಿತ ಮುಸ್ಲಿಮ್ ಮಹಿಳೆಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಕಾನೂನುಬದ್ಧವಾಗಿ ಮದುವೆಯಾಗಿರುವ ಮುಸ್ಲಿಂ ಮಹಿಳೆಯು ವಿವಾಹೇತರ ಸಂಬಂಧವನ್ನು ಹೊಂದುವುದಾಗಲಿ ಮತ್ತು ಲಿವ್ ಇನ್ ರಿಲೇಶನ್ಶಿಪ್ಲ್ಲಿರುವುದಾಗಲಿ ಶರಿಯಾ ಕಾನೂನು ಪ್ರಕಾರ ಮಾನ್ಯವಲ್ಲ. ಅಂಥ ಸಂಬಂಧವು ಝಿನಾ(ವ್ಯಭಿಚಾರ) ಮತ್ತು ಹರಾಮ್ (ಹಾದರ) ಎನಿಸಿಕೊಳ್ಳುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಹಿಂದೂ ಪುರುಷನೊಂದಿಗೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಮಹಿಳೆಯೊಬ್ಬಳು ತನ್ನ ತಂದೆ ಹಾಗೂ ಸಂಬಂಧಿಕರಿಂದ ಜೀವ ಬೆದರಿಕೆ ಇದ್ದು ರಕ್ಷಣೆ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದಳು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ರೇಣು ಅಗರ್ವಾಲ್ ಅವರು, ಈ ಅಪರಾಧ ಕೃತ್ಯವನ್ನು ನ್ಯಾಯಾಲಯ ದಿಂದ ಬೆಂಬಲಿಸುವುದಾಗಲಿ ರಕ್ಷಣೆ ಮಾಡುವುದಾಗಲಿ ಸಾಧ್ಯವಿಲ್ಲ ಎಂದು ಹೇಳಿದರು. ಕೋರ್ಟ್ ಮೊರೆ ಹೋಗಿರುವ ಮಹಿಳೆಯ ಗಂಡ ಆಕೆಯನ್ನು ತ್ಯಜಿಸಿದ್ದ. ಆ ಬಳಿಕ ಆಕೆ ಹಿಂದೂ ಪುರುಷನೊಂದಿಗೆ ಲಿವ್ ಇನ್ ಸಂಬಂಧವನ್ನು ಹೊಂದಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ