ಕೇಬಲ್ ನಿಯಮ: ಗಡುವು ವಿಸ್ತರಣೆ
Team Udayavani, Feb 13, 2019, 12:30 AM IST
ಹೊಸದಿಲ್ಲಿ: ಕೇಬಲ್ ಮತ್ತು ಡಿಟಿಎಚ್ಗೆ ಸಂಬಂಧಿಸಿ ರೂಪಿಸಿದ್ದ ಹೊಸ ನಿಯಮಗಳನ್ನು ಪಾಲಿಸಲು ವಿಧಿಸಿದ್ದ ಗಡುವನ್ನು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮಾರ್ಚ್ 31ರ ವರೆಗೆ ವಿಸ್ತರಿಸಿದೆ. ಇದರಿಂದ ಗ್ರಾಹಕರು ಸ್ವಲ್ಪಮಟ್ಟಿಗೆ ನಿರಾಳರಾಗಿದ್ದಾರೆ.ಇನ್ನೂ ತಮ್ಮ ಆಯ್ಕೆಗಳನ್ನು ಅಳವಡಿಸಿಕೊಳ್ಳದಂತಹ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಾ.31ರ ವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಟ್ರಾಯ್ ಮಂಗಳವಾರ ಘೋಷಿಸಿದೆ. ಈ ಅವಧಿಯೊಳಗೆ ಎಲ್ಲ ಗ್ರಾಹಕರಿಗೂ ಅವರ ಆಯ್ಕೆಯ ಚಾನೆಲ್ಗಳನ್ನು ಒದಗಿಸುವಂತೆ ಸೂಚಿಸಲಾಗಿದೆ.