ಗುತ್ತಿಗೆ ಪಡೆಯಲು 11.80 ಲಕ್ಷ ಡಾಲರ್ ಲಂಚ: ಸಿಬಿಐ ಕೇಸ್
Team Udayavani, Feb 10, 2018, 3:22 PM IST
ಹೊಸದಿಲ್ಲಿ : ಅಮೆರಿಕ ಸಿಡಿಎಂ ಸ್ಮಿತ್ ಎಂಬ ಸಂಸ್ಥೆಯ ಭಾರತೀಯ ಉಪ ಸಂಸ್ಥೆಯ ಕೆಲವು ಎಕ್ಸಿಕ್ಯುಟೀವ್ಗಳು ಮತ್ತು ಅಪರಿಚಿತ ಅಧಿಕಾರಿಗಳು ಗುತ್ತಿಗೆಗಳನ್ನು ಪಡೆಯುವುದಕ್ಕಾಗಿ 11.80 ಲಕ್ಷ ಅಮೆರಿಕನ್ ಡಾಲರ್ ಲಂಚ ಪಡೆದಿದ್ದಾರೆ ಎನ್ನಲಾಗಿದ್ದು ಅವರ ವಿರುದ್ಧ ಸಿಬಿಐ ಕೇಸು ದಾಖಲಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಮತ್ತು ಚೆನ್ನೈನಲ್ಲಿನ ಸಿಡಿಎಂ ಸ್ಮಿತ್ ಕಂಪೆನಿಯ ಕಚೇರಿಗಳ ಮೇಲೆ ಸಿಬಿಐ ಇಂದು ಬೆಳಗ್ಗಿನಿಂದ ದಾಳಿ ನಡೆಸಿದೆಯಲ್ಲದೆ ಕಂಪೆನಿಯ ಆಗಿನ ಹಣಕಾಸು ನಿರ್ದೇಶಕರಾಗಿದ್ದ ಗೋಪಕುಮಾರ್ ಅವರ ನಿವಾಸದ ಮೇಲೆ ಕೂಡ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.