Chandrayaan-3; ಚಂದ್ರನ ಕಕ್ಷೆ ಪ್ರವೇಶ: ಇತಿಹಾಸ ನಿರ್ಮಿಸಲು ಇನ್ನೊಂದು ಹೆಜ್ಜೆ ಹತ್ತಿರ
Team Udayavani, Aug 5, 2023, 8:32 PM IST
ಹೊಸದಿಲ್ಲಿ: ಮಹತ್ವಾಕಾಂಕ್ಷೆಯ ಭಾರತದ ”ಚಂದ್ರಯಾನ-3” ಚಂದ್ರನತ್ತ ಪ್ರಯಾಣ ಆರಂಭಿಸಿರುವ ಬಾಹ್ಯಾಕಾಶ ನೌಕೆ ಶನಿವಾರ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರನ ಕಕ್ಷೆಯ ಪ್ರವೇಶವನ್ನು (LOI) ಸುಮಾರು ರಾತ್ರಿ 7 ಗಂಟೆಗೆ ( IST) ನಡೆಸಲಾಯಿತು ಎಂದು ತಿಳಿಸಿದೆ. ಬಾಹ್ಯಾಕಾಶ ನೌಕೆಯನ್ನು ಸ್ಥಿರ ಚಂದ್ರನ ಕಕ್ಷೆಗೆ ಸೇರ್ಪಡೆಗೋಳಿಸಲಾಗಿದೆ.
ಜು.14ರಂದು ಚಂದ್ರಯಾನ-3 ನೌಕೆಯು ನಭಕ್ಕೆ ಚಿಮ್ಮಿತ್ತು. ಅದಾದ ಅನಂತರ 3 ವಾರಗಳಲ್ಲಿ ಒಟ್ಟು 5 ಬಾರಿ ಕಕ್ಷೆ ಎತ್ತರಿಸುವ ಪ್ರಕ್ರಿಯೆ ನಡೆದಿದೆ. ಶನಿವಾರ ಕೆಮಿಕಲ್ ರಾಕೆಟ್ ಎಂಜಿನ್ ಮೂಲಕ ಬಾಹ್ಯಾಕಾಶ ನೌಕೆಯ ವೇಗ ವರ್ಧಿಸಲಾಗಿದೆ. ವೇಗವು ಹೆಚ್ಚಾದಂತೆ ನೌಕೆಯ ಕಕ್ಷೆಯು ಭೂಮಿಯ ಕೆಳ ವೃತ್ತಾಕಾರ ಕಕ್ಷೆಯಿಂದ ಭಿನ್ನಕೇಂದ್ರೀಯ ಕಕ್ಷೆಗೆ ಬದಲಾಗುತ್ತಾ, ಚಂದ್ರನ ಕಕ್ಷೆಯನ್ನು ಪ್ರವೇಶಿಸುತ್ತದೆ. ಅನಂತರದಲ್ಲೂ ಹಲವು ಪ್ರಕ್ರಿಯೆಗಳು ನಡೆಯಲಿದ್ದು, ಆ.23ರಂದು ಚಂದ್ರನ ಮೇಲ್ಮೈ ಮೇಲೆ ನೌಕೆಯನ್ನು ಸಾಫ್ಟ್ ಲ್ಯಾಂಡಿಂಗ್ ಮಾಡಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
MUST WATCH
ಹೊಸ ಸೇರ್ಪಡೆ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ
Sandalwood: ಬಿಸಿಲ ಧಗೆ ಎಫೆಕ್ಟ್; ಔಟ್ಡೋರ್ ಶೂಟಿಂಗ್ನಿಂದ ಸಿನಿಮಂದಿ ದೂರ
ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ
Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ