ಚೀನಾ ಬಿಕ್ಕಟ್ಟು ಗಂಭೀರ: ಪಾಂಗಾಂಗ್‌ನ “ಫಿಂಗರ್‌ 3′ ಬಳಿ ಡ್ರ್ಯಾಗನ್‌ನ ಸೇನಾ ನಿರ್ಮಾಣ ಪತ್ತೆ


Team Udayavani, Sep 10, 2020, 6:15 AM IST

ಚೀನಾ ಬಿಕ್ಕಟ್ಟು ಗಂಭೀರ: ಪಾಂಗಾಂಗ್‌ನ “ಫಿಂಗರ್‌ 3′ ಬಳಿ ಡ್ರ್ಯಾಗನ್‌ನ ಸೇನಾ ನಿರ್ಮಾಣ ಪತ್ತೆ

ನವದೆಹಲಿ: ಭಾರತ-ಚೀನಾ ಗಡಿ ಬಿಕ್ಕಟ್ಟು ಮತ್ತಷ್ಟು ಗಂಭೀರ ಸ್ವರೂಪ ಪಡೆದಿದೆ. ಪೂರ್ವ ಲಡಾಖ್‌ನ ಪಾಂಗಾಂಗ್‌ ಸರೋವರದ ಉತ್ತರಕ್ಕೆ ಇರುವ ದಿಬ್ಬದ ಪ್ರದೇಶದಲ್ಲಿ ಚೀನಾ ಸೇನೆ, ಹೊಸ ವಸಾಹತನ್ನು ನಿರ್ಮಿಸಿಕೊಂಡಿರುವುದನ್ನು ಭಾರತೀಯ ಸೇನೆ ಪತ್ತೆ ಹಚ್ಚಿದೆ. ಇದು ಗಮನಕ್ಕೆ ಬರುತ್ತಲೇ ಭಾರತೀಯ ವಾಯುಪಡೆ, ಆ ಪ್ರಾಂತ್ಯದ ಮೇಲೆ ತನ್ನ ಯುದ್ಧ ವಿಮಾನಗಳನ್ನು ಹಾರಾಡಿಸುವ ಮೂಲಕ ಚೀನಾ ಸೈನಿಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಸೆ. 8-9ರ ಮಧ್ಯರಾತ್ರಿ ಭಾರತದ ಯುದ್ಧ ವಿಮಾನಗಳಾದ ಸುಖೋಯ್‌, ಮಿಗ್‌ ಹಾಗೂ ಟ್ರಾನ್ಸ್‌ಪೋರ್ಟ್‌ ಏರ್‌ಕ್ರಾಫ್ಟ್ ವಿಮಾನಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಸದಲ್ಲಿ ಹಾರಾಡಿ, ಏರ್‌ ಸಾರ್ಟಿಂಗ್‌ಗಳನ್ನು ನಡೆಸಿವೆ. ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಅವರು ಗುರುವಾರ ಭೇಟಿಯಾಗಲಿದ್ದು, ಅದಕ್ಕೂ ಮುನ್ನವೇ ಈ ಹೊಸ ಬೆಳವಣಿಗೆ ಪಾಂಗಾಂಗ್‌ ಸರೋವರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಆತಂಕದ ಅಲೆ ಎಬ್ಬಿಸಿದೆ.

ಗುಂಡಿನ ಮೊರೆತದ ನಂತರದ ಬೆಳವಣಿಗೆ: ಸೆ. 7ರ ಸಂಜೆ ಹಾಗೂ ರಾತ್ರಿಯ ವೇಳೆ, ಪಾಂಗಾಂಗ್‌ ಸರೋವರದ ಬಳಿ ಗುಂಡು ಹಾರಿದ ಸದ್ದು ಕೇಳಿಬಂದಿತ್ತು. ಅದಕ್ಕೆ ವಿವರಣೆ ನೀಡಿದ್ದ ಚೀನಾ, “ಭಾರತೀಯ ಸೈನಿಕರು ಗಡಿ ದಾಟಿ ಬಂದು ಚೀನಾದ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸಿದರು. ಆ ಸಂದರ್ಭದಲ್ಲಿ ಅವರು ಚೀನಾ ಸೈನಿಕರನ್ನು ಬೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದರು’ ಎಂದಿತ್ತು.

ಇದನ್ನೂ ಓದಿ: ಭಾರತ, ಚೀನಾ ಗಡಿ ಸಂಘರ್ಷ ಸಂದರ್ಭ 400 ಪಾಕ್ ಉಗ್ರರು ಒಳನುಗ್ಗಲು ಯತ್ನ! ವರದಿ

ಆದರೆ, ಇದನ್ನು ಸ್ಪಷ್ಟ ಮಾತುಗಳಲ್ಲಿ ತಳ್ಳಿಹಾಕಿದ್ದ ಭಾರತ, “ಪಾಂಗಾಂಗ್‌ ಸರೋವರದ ದಕ್ಷಿಣ ಭಾಗದಲ್ಲಿರುವ ಗುರುಂಗ್‌ ಹಿಲ್‌ ಹಾಗೂ ರಝಾಂಗ್ಲಾ ಹಿಲ್‌ಗಳ ನಡುವಿನ ಮುಖ್ರಿ ಪ್ರದೇಶದಲ್ಲಿರುವ ಭಾರತದ ಕಟ್ಟಕಡೆಯ ಸೇನಾ ಪೋಸ್ಟ್‌ ಅನ್ನು ಆಕ್ರಮಿಸಿಕೊಳ್ಳಲು ಚೀನಾ ದ ಸೈನಿಕರು ಯತ್ನಿಸಿದ್ದರು. ಆಗ ಭಾರತೀಯ ಸೈನಿಕರನ್ನು ಭೀತಿಗೊಳಿಸಲು ಅವ ರು ಗಾಳಿಯಲ್ಲಿ ಗುಂಡು ಹಾರಿಸಿದ್ದರು ಎಂದು ಹೇಳಿತ್ತು. ಈ ಎಲ್ಲಾ ವಿದ್ಯಮಾನಗಳು ಜರುಗಿದ ಕೆಲವೇ ಗಂಟೆಗಳಲ್ಲಿ ಪಾಂಗಾಂಗ್‌ನ ಉತ್ತರ ದಿಕ್ಕಿನಲ್ಲಿ ಚೀನಾದ ತನ್ನ ಹೊಸ ನಿರ್ಮಾಣ ಮಾಡಿರುವುದು ಕಂಡುಬಂದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಆತಂಕಕಾರಿಯನ್ನಾಗಿಸಿದೆ.

ಅಧಿಕಾರಿಗಳು ಹೇಳ್ಳೋದೇನು?: ಪಾಂಗಾಂಗ್‌ ಸರೋವರದ ಫಿಂಗರ್‌ 3 ಬಳಿಯಲ್ಲಿ ಈ ನಿರ್ಮಾಣ ಕಂಡುಬಂದಿದ್ದು ಸರೋವರದ ಈ ಬದಿಯಲ್ಲಿರುವ ಭಾರತದ ನೆಲೆಯಿಂದ ನೋಡಿದರೆ ಅದು ಗೋಚರಿಸುತ್ತದೆ ಎಂದು ಭಾರತೀಯ ಸೇನಾಧಿಕಾರಿಗಳು ತಿಳಿಸಿದ್ದಾರೆ. “”ಫಿಂಗರ್‌ 3 ಪ್ರಾಂತ್ಯದಲ್ಲಿ ಯುದ್ಧ ವಿಮಾನಗಳ ಹಾರಾಟದ ಮೂಲಕ ಚೀನಾ ಸೇನೆಯ ಹೊಸ ನಿರ್ಮಾಣ ತನ್ನ ಗಮನಕ್ಕೆ ಬಂದಿರುವುದನ್ನು ತಿಳಿಯಪಡಿಸಿದ್ದೇವೆ. ಅಲ್ಲದೆ, ಭಾರತ ಎಂಥ ಪರಿಸ್ಥಿತಿಯನ್ನಾದರೂ ಎದುರಿಸಲು ಸನ್ನದ್ಧವಾಗಿದೆ” ಎಂಬ ಸಂದೇಶವನ್ನು ರವಾನಿಸಲಾಗಿದೆ’ ಎಂದು ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ. ಯುದ್ಧ ವಿಮಾನಗಳ ಹಾರಾಟದ ಜೊತೆಯಲ್ಲೇ “”ಫಿಂಗರ್‌ 3 ಬಳಿ ಭಾರತೀಯ ಯೋಧರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಭಾರತ ಮತ್ತು ಚೀನ: 3 ದಶಕದ ಗಡಿ ಒಪ್ಪಂದಗಳು

ಚೀನಾದಿಂದ ಮತ್ತಷ್ಟು ಸೇನೆ
ಲಡಾಖ್‌ನಲ್ಲಿ ಸೋಮವಾರ, ಮಂಗಳವಾರ ನಡೆದಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಎರಡೂ ದೇಶಗಳ ನೈಜ ಗಡಿ ರೇಖೆಯಲ್ಲಿ ಚೀನಾ ಸರ್ಕಾರ ಮತ್ತಷ್ಟು ಸೇನಾ ಜಮಾವಣೆ ಮಾಡಿ ದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯೂ ಗಡಿ ರೇಖೆಯ ಬಳಿ ಹೆಚ್ಚುವರಿ ಯೋಧರನ್ನು ಜಮಾವಣೆಗೊಳಿಸಿದೆ. ಸೋಮವಾರ, ಭಾರತಕ್ಕೆ ಸೇರಿದ ಮುಖ್ರಿ ವಲಯವನ್ನು ವಶಕ್ಕೆ ಪಡೆಯಲು ಚೀನಾ ಸೈನಿಕರು ವಿಫ‌ಲ ಯತ್ನ ನಡೆಸಿದ್ದಾರೆ. ಇಂಥ ಘಟನೆಗಳು ಮರುಕಳಿಸುವ ಸಾಧ್ಯತೆಗಳು ದಟ್ಟವಾಗಿವೆ. ಹಾಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಈ ನಿಯೋಜನೆ ಮಾಡಲಾಗಿದೆ ಎಂದು ಭಾರತೀಯ ಸೇನೆ ಹೇಳಿದೆ.

ಇದನ್ನೂ ಓದಿ: ಚೀನಾ ಯುದ್ಧೋತ್ಸಾಹ, ಭಾರತದ ನಡೆಗೆ ದೊಡ್ಡಣ್ಣನ ಬಹುಪರಾಕ್!

ಜೈಶಂಕರ್‌-ವಾಂಗ್‌ ಭೇಟಿ ಇಂದು
ಮಾಸ್ಕೋದಲ್ಲಿ ನಡೆಯುತ್ತಿರುವ ಶಾಂಘೈ ಕೊಆಪರೇಷನ್‌ ಆರ್ಗನೈಸೇಷನ್‌ (ಎಸ್‌ಸಿಒ) ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಭಾರತದ ವಿದೇಶಾಂಗ ಸಚಿವ ಜೈಶಂಕರ್‌, ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಅವರು, ಸಮ್ಮೇಳನದ ಬಿಡುವಿನ ವೇಳೆಯಲ್ಲಿ ಭೇಟಿಯಾಗಲಿದ್ದಾರೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ. ಆದರೆ, ಇದು ನೇರ ಭೇಟಿಯೇ ಅಥವಾ ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲಾ ನಾಯಕರು ಒಟ್ಟಿಗೆ ಸೇರಿದಾಗ ಆಗುವ ಭೇಟಿಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಪತ್ರಿಕೆ ತಿಳಿಸಿದೆ.

ಟಾಪ್ ನ್ಯೂಸ್

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.