ಭಾರತ ನಮ್ಮ 5ನೇ ದೊಡ್ಡ ಮಾರುಕಟ್ಟೆ: ಕೋಕಾಕೋಲ
Team Udayavani, Feb 3, 2018, 10:30 AM IST
ಕೋಲ್ಕತಾ: ತಾನೇ ಸೃಷ್ಟಿಸಿರುವ ‘ಥಮ್ಸ್ ಅಪ್’ ಬ್ರಾಂಡ್ ಪೇಯವನ್ನು ಇದೇ ವರ್ಷದ ಮಾರ್ಚ್ ವೇಳೆಗೆ ದಕ್ಷಿಣ ಏಷ್ಯಾದ ಎಲ್ಲಾ ಮಾರುಕಟ್ಟೆಗಳಿಗೂ ಪರಿಚಯಿಸಲಾಗುತ್ತಿದ್ದು, ಇದಕ್ಕೆ ಪೂರಕವಾಗಿ ಭಾರತವು ತನ್ನ ಬ್ರಾಂಡ್ಗೆ ಹೆಚ್ಚು ಬೇಡಿಕೆ ಇರುವ ವಿಶ್ವದ ಐದನೇ ಮಾರುಕಟ್ಟೆಯಾಗಲಿದೆ ಎಂದು ‘ಕೋಕಾ ಕೋಲ’ ಹೇಳಿಕೊಂಡಿದೆ. ಮಾರ್ಚ್ ವೇಳೆಗೆ, ಕೋಕ ಕೋಲವನ್ನು ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್, ನೇಪಾಲಗಳಿಗೂ ಕೊಂಡೊಯ್ಯಲಾಗುತ್ತದೆ ಎಂದಿರುವ ‘ಕೋಕ ಕೋಲಾ ಇಂಡಿಯಾ ನೈರುತ್ಯ ಏಷ್ಯಾ ಮಾರುಕಟ್ಟೆ’ ವಿಭಾಗ ಮುಖ್ಯಸ್ಥ ಟಿ. ಕೃಷ್ಣ ಕುಮಾರ್, ‘ಭಾರತದಲ್ಲಿ ಥಮ್ಸ್ ಅಪ್ ವಹಿವಾಟು 2020ಕ್ಕೆ 64,000 ಕೋಟಿ ರೂ.ಗಳಿಗೆ ಮುಟ್ಟುವ ಸಾಧ್ಯತೆಯಿದೆ ಎಂದಿದ್ದಾರೆ.