ಕಚ್ಚಾತೈಲ ಆಮದು: ಸೌದಿ, ಇರಾಕ್ ಮೀರಿಸಿದ ರಷ್ಯಾ
Team Udayavani, Aug 6, 2022, 5:45 AM IST
ಹೊಸದಿಲ್ಲಿ: ಭಾರತಕ್ಕೆ ಕಚ್ಚಾ ತೈಲ ಪೂರೈಕೆ ವಿಚಾರದಲ್ಲಿ ಇದುವರೆಗೆ ಕೊಲ್ಲಿ ರಾಷ್ಟ್ರಗಳು ಮುಂಚೂಣಿಯಲ್ಲಿದ್ದವು. ಆದರೆ, ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲು ಶುರು ಮಾಡಿದ ಬಳಿಕ ಆ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿವೆ. ಏಪ್ರಿಲ್‌ನಿಂದ ಜೂನ್‌ವರೆಗೆ ದೇಶಕ್ಕೆ ಆಮದಾ ಗಿರುವ ಕಚ್ಚಾ ತೈಲ ಪ್ರಮಾಣದಲ್ಲಿ ರಷ್ಯಾದಿಂದ ಬಂದಿರುವುದೇ ಹೆಚ್ಚು.
ಪ್ರತಿ ಬ್ಯಾರೆಲ್ ಕಚ್ಚಾ ತೈಲಕ್ಕೆ 19 ಡಾಲರ್ ಕಡಿಮೆಗೆ ಸಿಗುವುದೇ ಇದಕ್ಕೆ ಕಾರಣವಾಗಿದೆ. ಇರಾಕ್‌ಗೆ ಹೋಲಿಸಿದರೆ ಸಾಂಖೀÂಕ ಮಾಹಿತಿ ಯಲ್ಲಿ ರಷ್ಯಾ ಹಿಂದುಳಿದಿದೆ. ಕೊರೊನಾ ಸೋಂಕಿನ ಸಮಸ್ಯೆ ಇಳಿಕೆಯಾದ ಬಳಿಕ ಕಚ್ಚಾ ತೈಲಕ್ಕೆ ಕೇಂದ್ರ ಪಾವತಿ ಮಾಡಬೇಕಾಗಿರುವ ಮೊತ್ತ 47.5 ಬಿಲಿಯನ್ ಡಾಲರ್‌ಗೆ ಏರಿತ್ತು.
ಮಾರ್ಚ್‌ನಲ್ಲಿ ರಷ್ಯಾದಿಂದ ದೇಶಕ್ಕೆ ತೈಲ ಆಮದು ಪ್ರತಿದಿನ 0.5 ಮಿಲಿಯನ್ ಬ್ಯಾರೆಲ್‌ಗಿಂತ ಕಡಿಮೆಯಾಗಿತ್ತು. ಜೂನ್‌ನಲ್ಲಿ ಅದರ ಪ್ರಮಾಣ 3 ಮಿಲಿಯ ಬ್ಯಾರೆಲ್‌ಗೆ ಏರಿದೆ.
ಇದರಿಂದಾಗಿ ಸೌದಿ ಅರೇಬಿಯಾ, ಇರಾಕ್ ಮೇಲಿನ ಅವಲಂಬನೆ ಕಡಿಮೆ ಯಾಗಿತ್ತು. ಸೌದಿಯಿಂದ ಬ್ಯಾರೆಲ್ ಕಚ್ಚಾ ತೈಲಕ್ಕೆ 110 ಡಾಲರ್ ನೀಡಬೇಕಾಗುತ್ತಿದ್ದರೆ, ರಷ್ಯಾಕ್ಕೆ 100 ಡಾಲರ್ ನೀಡಿದ್ದರೆ ಸಾಕಾಗುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧ್ವಜಾರೋಹಣ:ಗಮನಸೆಳೆದ ಪ್ರಧಾನಿ ಮೋದಿ ಪೇಟಾ, ಬಿಳಿಕುರ್ತಾ; ಈ ಬಾರಿ ಟೆಲಿಪ್ರಾಂಪ್ಟರ್ ಗೆ ಕೊಕ್
ಮುಂದಿನ ಪೀಳಿಗೆಗಾಗಿ ನವಭಾರತದ ನಿರ್ಮಾಣ :ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ಭಾಷಣ
ನಿಮ್ಮ ಮಕ್ಕಳಿಗೆ ವಿದ್ಯಾರ್ಥಿ ವೇತನ ಬೇಕೇ? ಹಾಗಾದರೆ ನೀವು ಮದ್ಯಪಾನ ತ್ಯಜಿಸಿ
38 ವರ್ಷಗಳ ನಂತರ ಸಿಕ್ಕಿತು ಹುತಾತ್ಮ ಯೋಧನ ಮೂಳೆ! ಅಂತಿಮ ನಮನಕ್ಕಾಗಿ ಕಾಯುತ್ತಿದೆ ಕುಟುಂಬ
ದೇವೇಂದ್ರ ಫಡ್ನವೀಸ್ಗೆ ಮಹಾ ಗೃಹ, ಆರ್ಥಿಕ ಹೊಣೆ