ಈ ವಾರದಲ್ಲೇ ಸಿಟಿಇಟಿ ಫಲಿತಾಂಶ
Team Udayavani, Feb 18, 2022, 6:48 AM IST
ಹೊಸದಿಲ್ಲಿ: ಕಳೆದಸಾಲಿನ ರಾಷ್ಟ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ (ಸಿಟಿಇಟಿ)ಯ ಫಲಿತಾಂಶವನ್ನು ಸಿಬಿಎಸ್ಇ ಈ ವಾರದಲ್ಲೇ ಪ್ರಕಟಿಸಲಿದೆ.
2021ನೇ ಸಾಲಿನ ಸಿಟಿಇಟಿ ಪರೀಕ್ಷೆ ಯನ್ನು ಕಳೆದ ಡಿಸೆಂಬರ್ ಹಾಗೂ ಜನವರಿಯಲ್ಲಿ ದೇಶವ್ಯಾಪಿಯಾಗಿ ನಡೆಸಲಾಗಿದ್ದು, ಸುಮಾರು 20 ಲಕ್ಷ ಮಂದಿ ಪರೀಕ್ಷೆ ಬರೆದಿದ್ದಾರೆ.
ಪರೀಕ್ಷೆಯ ಒಂದನೇ ಪತ್ರಿಕೆಯಲ್ಲಿ ತೇರ್ಗಡೆಯಾದವರು 1ರಿಂದ 5ನೇ ತರಗತಿ ಹಾಗೂ ಎರಡೂ ಪತ್ರಿಕೆಯಲ್ಲಿ ತೇರ್ಗಡೆಯಾದ ವರು 6ರಿಂದ 9ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಅರ್ಹರಾಗಿರುತ್ತಾರೆ. ಫಲಿತಾಂಶಕ್ಕಾಗಿ ಅಧಿಕೃತ ವೆಬ್ಸೈಟ್ https://ctet.nic.in ಅನ್ನು ಪರಿಶೀಲಿಸಬಹುದು.