ದಾವೂದ್ ಬಂಟನ ವಿರುದ್ಧ ಗುಟ್ಕಾ ಕೇಸ್
Team Udayavani, Mar 10, 2018, 6:30 AM IST
ಮುಂಬೈ: ಗುರುವಾರ ಬಂಧಿತನಾದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಟ ಫಾರೂಕ್ ಟಕ್ಲಾ ವಿರುದ್ಧ ಗುಟ್ಕಾ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಮಹಾರಾಷ್ಟ್ರ ಕೋರ್ಟ್ನಲ್ಲಿ ಈತನ ವಿರುದ್ಧ ಈಗಾಗಲೇ ವಿಚಾರಣೆ ನಡೆಯುತ್ತಿದ್ದು, ದಾವೂದ್ ಇಬ್ರಾಹಿಂನ ಸೋದರ ಅನೀಸ್ಗೆ ಪಾಕಿಸ್ತಾನದಲ್ಲಿ ಗುಟ್ಕಾ ಘಟಕ ಸ್ಥಾಪಿಸಲು ಯಂತ್ರಗಳನ್ನು ಟಕ್ಲಾ ಸಾಗಿಸಿದ್ದ ಎಂಬ ಆರೋಪ ಇದಾಗಿದೆ. ಈ ಪ್ರಕರಣದಲ್ಲೇ ಮೊದಲು ಟಕ್ಲಾ ಹೆಸರು ಕಾಣಿಸಿಕೊಂಡಿದ್ದು, ಪೊಲೀಸರ ತನಿಖೆಯ ವೇಳೆ ಟಕ್ಲಾನ ಇತರ ಕುಕೃತ್ಯಗಳೂ ಬೆಳಕಿಗೆ ಬಂದಿದ್ದವು ಎಂದು ಹೇಳಲಾಗಿದೆ.