ದಿಲ್ಲಿ ಏಮ್ಸ್ ಆಸ್ಪತ್ರೆಯ ಟ್ರಾಮಾ ಘಟಕದಲ್ಲಿ ಅಗ್ನಿ ಅವಘಡ
Team Udayavani, Mar 24, 2019, 7:00 PM IST
ಹೊಸದಿಲ್ಲಿ : ಏಮ್ಸ್ ಆಸ್ಪತ್ರೆಯ ಟ್ರಾಮಾ ಘಟಕದಲ್ಲಿ ಭಾನುವಾರ ಸಂಜೆ ಅಗ್ನಿ ಅವಘಡ ಸಂಭವಿಸಿದೆ. ದಟ್ಟ ಹೊಗೆ ಆಸ್ಪತ್ರೆಯ ಸುತ್ತಲು ಆವರಿಸಿದೆ.
ಸ್ಥಳಕ್ಕೆ 4 ಅಗ್ನಿ ಶಾಮಕ ದಳದ ವಾಹನಗಳೊಂದಿಗೆ ಸಿಬಂದಿ ಆಗಮಿಸಿದ್ದು ಬೆಂಕಿಯನ್ನು ನಂದಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ.
ಇದುವರೆಗೆ ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ.