ಕನ್ಹಯ್ಯ ಕುಮಾರ್ ವಿರುದ್ಧದ JNU ಕ್ರಮ ಕಾನೂನುಬಾಹಿರ: ಹೈಕೋರ್ಟ್
Team Udayavani, Jul 20, 2018, 7:04 PM IST
ಹೊಸದಿಲ್ಲಿ : ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ನಾಯಕ ಕನ್ಹಯ್ಯ ಕುಮಾರ್ ಗೆ ದಂಡ ವಿಧಿಸಿರುವ ವಿಶ್ವವಿದ್ಯಾಲಯದ ಕ್ರಮವನ್ನು ದಿಲ್ಲಿ ಹೈಕೋರ್ಟ್ ಅನೂರ್ಜಿತಗೊಳಿಸಿದೆ.
ವಿಶ್ವವಿದ್ಯಾಲಯದ ಈ ಕ್ರಮವು ಕಾನೂನುಬಾಹಿರ, ಅವಿವೀಕತನದ್ದು ಮತ್ತು ಕ್ರಮಬದ್ಧವಾಗಿಲ್ಲದಿರುವುದಾಗಿದೆ ಎಂದು ಹೈಕೋರ್ಟ್ ಹೇಳಿದೆ. ಎಎನ್ಐ ಸುದ್ದಿ ಸಂಸ್ಥೆ ಹೈಕೋರ್ಟಿನ ತೀರ್ಪನ್ನು ಉಲ್ಲೇಖೀಸಿ ವರದಿ ಮಾಡಿದೆ.
ಕನ್ಹಯ್ಯ ಕುಮಾರ್ ಪ್ರಕರಣದ ವಿಚಾರಣೆ ಪೂರ್ತಿಯಾಗುವ ತನಕ ಜೆಎನ್ಯು ಕಾಯಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ. ದಿಲ್ಲಿ ಹೈಕೋರ್ಟ್ ತನ್ನ ಜು.18ರ ಆದೇಶದಲ್ಲಿ, ಕನ್ಹಯ್ಯ ಕುಮಾರ್ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣಕ್ಕೆ ಸಂಬಂಧಪಟ್ಟು ಯಾವುದೇ ಕ್ರಮ ಕೈಗೊಳ್ಳದಂತೆ ಜೆಎನ್ಯು ವನ್ನು ಕೇಳಿಕೊಂಡಿತ್ತು.
2016ರ ಪ್ರಕರಣದಲ್ಲಿ ಕನ್ಹಯ್ಯ ಕುಮಾರ್ಗೆ ಜೆಎನ್ಯು 10,000 ರೂ. ದಂಡ ಹೇರಿತ್ತು.