ದಿಲ್ಲಿ ಹಿಂಡಾನ್ ವಾಯುನೆಲೆಯಿಂದ ಹುಬ್ಬಳ್ಳಿಗೆ ನೇರ ವಿಮಾನ
ವಾರದಲ್ಲಿ ಮೂರು ದಿನ ಯಾನ
Team Udayavani, Nov 5, 2019, 7:34 PM IST
ಹೊಸದಿಲ್ಲಿ : ರಾಜ್ಯದ ವಾಣಿಜ್ಯ ನಗರಿಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ಹುಬ್ಬಳ್ಳಿ-ಹೊಸದಿಲ್ಲಿ (ಹಿಂಡಾನ್) ವಿಮಾನ ಯಾನದ ಬೇಡಿಕೆ ಕೊನೆಗೂ ಈಡೇರುತ್ತಿದೆ. ಬುಧವಾರದಿಂದ ವಿಮಾನ ಯಾನ ಪ್ರಾರಂಭವಾಗಲಿದೆ ಎಂದು ಸ್ಟಾರ್ ಏರ್ ಸಂಸ್ಥೆ ತಿಳಿಸಿದೆ.
ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸ್ಟಾರ್ ಏರ್ ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜ್ ಕುನ್ವಾರ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ನಾಳೆಯಿಂದ ಹಿಂಡಾನ್ ವಾಯುನೆಲೆಯಿಂದ ಅಧಿಕೃತವಾಗಿ ಸ್ಟಾರ್ ಏರ್ ಒಡೆತನದ ವಿಮಾನ ಹುಬ್ಬಳಿಗೆ ಹಾರಾಟ ನಡೆಸಲಿದೆ. ವಾರದ ಮೂರು ದಿನ ಹಾರಾಟ ನಡೆಸಲಿದ್ದು ವಿಮಾನದಲ್ಲಿ ಒಟ್ಟು 50 ಸೀಟುಗಳು ಇರಲಿವೆ.
ವೇಳಾಪಟ್ಟಿ
ಮಧ್ಯಾಹ್ನ 1.05 ಕ್ಕೆ ಹುಬ್ಬಳ್ಳಿಯಿಂದ ಹೊರಡುವ ವಿಮಾನ 3.45ಕ್ಕೆ ಹಿಂಡಾನ್ ತಲುಪುತ್ತದೆ. ಪುನಃ ಅಲ್ಲಿಂದ ಸಂಜೆ 4.10 ಕ್ಕೆ ಹೊರಟು ಹುಬ್ಬಳ್ಳಿ ವಿ. ನಿಲ್ದಾಣಕ್ಕೆ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!