Delhi University; ರಾಹುಲ್ ಗಾಂಧಿಗೆ ದಿಲ್ಲಿ ವಿಶ್ವವಿದ್ಯಾಲಯ ನೋಟಿಸ್?
Team Udayavani, May 10, 2023, 7:23 AM IST
ಹೊಸದಿಲ್ಲಿ: ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಇತ್ತೀಚೆಗೆ ಭೇಟಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ನೋಟಿಸ್ ಜಾರಿಗೊಳಿಸಲು ದಿಲ್ಲಿ ವಿವಿ ಚಿಂತನೆ ನಡೆಸಿದೆ.
ಕಾಲೇಜು ಆವರಣದಲ್ಲಿ ವಿವಿಯ ಅನುಮತಿ ಇಲ್ಲದೇ, ವಿದ್ಯಾರ್ಥಿಗಳನ್ನು ಭೇಟಿಯಾಗಿರುವ ಹಿನ್ನೆಲೆ ನೋಟಿಸ್ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಭವಿಷ್ಯದಲ್ಲಿ ಇಂಥದ್ದು ಮರುಕಳಿಸಬಾರದು ಎಂದು ನೋಟಿಸ್ನಲ್ಲಿ ಉಲ್ಲೇಖೀ ಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ವಿವಿಯ ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಸ್ಟೆ ಲ್ಗೆ ರಾಹುಲ್ ಭೇಟಿ ನೀಡಿ, ಅವರೊಂದಿಗೆ ಊಟ ಮಾಡಿ ಸಂವಹನ ನಡೆಸಿದ್ದರು. ಈ ರೀತಿ ಅನಧಿಕೃತವಾಗಿ ಕ್ಯಾಂಪಸ್ ಪ್ರವೇಶಿ ಸುವುದು ಸಮಂಜಸವಲ್ಲವೆಂದು ನೋಟಿಸ್ ಜಾರಿ ಗೊಳಿಸಲು ವಿವಿ ನಿರ್ಧರಿಸಿದೆ ಎನ್ನಲಾಗಿದೆ.