ಡಿಟಿಎಚ್ ಶುಲ್ಕ 500 ರೂ.
Team Udayavani, Dec 28, 2018, 1:09 PM IST
ಹೊಸದಿಲ್ಲಿ: ಡೈರೆಕ್ಟ್ ಟು ಹೋಮ್ (ಡಿಟಿಎಚ್) ಸೇವೆಗಳ ಹೊಸ ಸಂಪರ್ಕಕ್ಕಾಗಿ ಆ ಸೇವೆಗಳನ್ನು ನೀಡುವ ಕಂಪೆನಿಗಳು ಗ್ರಾಹಕರ ಮೇಲೆ ವಿಧಿಸುತ್ತಿದ್ದ ದುಬಾರಿ ಶುಲ್ಕಕ್ಕೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಕಡಿವಾಣ ಹಾಕಿದೆ.
ಹೊಸ ಸಂಪರ್ಕ ಹಾಗೂ ಸೇವೆಗಳ ಆರಂಭಕ್ಕಾಗಿ 500 ರೂ.ಗಳನ್ನು ಮಾತ್ರವೇ ವಿಧಿಸಬೇಕೆಂದು ಟ್ರಾಯ್, ದೇಶದ ಎಲ್ಲ ಡಿಟಿಎಚ್ ಸೇವಾ ಸಂಸ್ಥೆಗಳಿಗೆ ಆದೇಶ ನೀಡಿದೆ. ಉದಾಹರಣೆಗೆ, ಟಾಟಾ ಸ್ಕೈ ಸಂಸ್ಥೆಯು ತನ್ನ ಹೊಸ ಸಂಪರ್ಕ ಹಾಗೂ ಸೇವೆಗಳ ಆರಂಭಕ್ಕಾಗಿ ಒಟ್ಟಾರೆ 1500 ರೂ.ಗಳನ್ನು (ಒಂದು ವರ್ಷದ ಪ್ಯಾಕೇಜ್ ಸಹಿತ) ವಿಧಿಸುತ್ತಿದೆ. ಏರ್ಟೆಲ್ ಸಂಸ್ಥೆಯು ಇದೇ ಸೇವೆಗಾಗಿ 1400 ರೂ. ಶುಲ್ಕ ವಿಧಿಸುತ್ತಿದೆ. ಆದರೆ ಇನ್ನು ಕೇವಲ 500 ರೂ.ಗೆ ಗ್ರಾಹಕರಿಗೆ ಹೊಸ ಸಂಪರ್ಕವನ್ನು ಡಿಟಿಎಚ್ ಸಂಸ್ಥೆ ಒದಗಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
Ban; ಎಂಡಿಎಚ್, ಎವರೆಸ್ಟ್ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?