ಸುಶಾಂತ್ ಸಿಂಗ್ಗೆ ಡ್ರಗ್ಸ್ ಪೂರೈಸಿದ್ದ ಪೆಡ್ಲರ್ ಬಂಧನ..!
Team Udayavani, Mar 8, 2021, 5:30 PM IST
ಮುಂಬೈ : ಬಾಲಿವುಡ್ ನಟ ಮೃತ ಸುಶಾಂತ್ ಸಿಂಗ್ ರಜಪೂತ್ಗೆ ಡ್ರಗ್ಸ್ ಪೂರೈಕೆ ಮಾಡಿದ್ದ ಆರೋಪದಲ್ಲಿ ಮಹಾರಾಜ್ ಸಿಂಗ್ ಹೆಸರಿನ ಡ್ರಗ್ಸ್ ಪೆಡ್ಲರ್ ನ ಬಂಧನವಾಗಿದೆ.
ಗೋವಾದಲ್ಲಿ ದಾಳಿ ನಡೆಸಿದ ಎನ್ಸಿಬಿ ತಂಡ ಪೆಡ್ಲರ್ ಮಹಾರಾಜ್ ಶಾ ಹಾಗೂ ಇಬ್ಬರು ವಿದೇಶಿಗರನ್ನು ಬಂಧಿಸಿ ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
2020 ಜೂನ್ 14 ರಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನ ಜತೆ ಡ್ರಗ್ಸ್ ಜಾಲ ತಳುಕು ಹಾಕಿಕೊಂಡಿತ್ತು. ಈ ಕುರಿತು ತನಿಖೆ ನಡೆಸುತ್ತಿರುವ ಎನ್ಸಿಬಿ ಅಧಿಕಾರಿಗಳು, ಕೆಲ ದಿನಗಳ ಹಿಂದೆಯಷ್ಟೇ ಸುಶಾಂತ್ ಗರ್ಲ್ಫ್ರೆಂಡ್ ರಿಹಾ ಚಕ್ರವರ್ತಿಯನ್ನು ಬಂಧಿಸಿತ್ತು. ಸದ್ಯ ಆಕೆ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಇದೀಗ ಮಹಾರಾಜ್ ಶಾ ಅವರನ್ನು ಬಂಧಿಸಿರುವ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.