NCP ಮುಖ್ಯಸ್ಥ ಶರದ್ ಪವಾರ್ ಅವರ ಮೊಮ್ಮಗನ ಬಾರಾಮತಿ ಕಂಪನಿ ಮೇಲೆ ಇಡಿ ದಾಳಿ
ರಾಜ್ಯ ಸಹಕಾರಿ ಬ್ಯಾಂಕ್ ಹಗರಣ...
Team Udayavani, Jan 5, 2024, 3:39 PM IST
ಬಾರಾಮತಿ: ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಮೊಮ್ಮಗ, ಶಾಸಕ ರೋಹಿತ್ ಪವಾರ್ ಒಡೆತನದ ಬಾರಾಮತಿ ಆಗ್ರೋ ಕಂಪನಿಯ ಆವರಣದಲ್ಲಿ ಜಾರಿ ನಿರ್ದೇಶನಾಲಯ ಶುಕ್ರವಾರ ಶೋಧ ನಡೆಸಿದೆ.
ಆಪಾದಿತ ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ಹಗರಣದ ಮನಿ ಲಾಂಡರಿಂಗ್ ತನಿಖೆಯ ಭಾಗವಾಗಿ ಘಟಕಗಳನ್ನು ಶೋಧ ನಡೆಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬಾರಾಮತಿ, ಪುಣೆ, ಪಿಂಪ್ರಿ ಮತ್ತು ಔರಂಗಾಬಾದ್ನಲ್ಲಿ ಕನಿಷ್ಠ ಆರು ಸ್ಥಳಗಳಲ್ಲಿ ಶೋಧ ನಡೆಸಸಲಾಗುತ್ತಿದೆ. ಬಾರಾಮತಿ ಪಟ್ಟಣದಲ್ಲಿರುವ ಬಾರಾಮತಿ ಆಗ್ರೋ ಕಚೇರಿಯಲ್ಲಿ ಹೆಚ್ಚಿನ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.