ಮಾರಣಾಂತಿಕ ಕೋವಿಡ್ 19 ವೈರಸ್: 8 ಮಂದಿ ಗುಣಮುಖರಾಗಿ ಮುಂಬೈ ಆಸ್ಪತ್ರೆಯಿಂದ ಡಿಸ್ಚಾರ್ಜ್
12 ಮಂದಿ ಕೋವಿಡ್ 19 ಪೀಡಿತರಲ್ಲಿ 8 ಮಂದಿ ಗುಣಮುಖರಾದ ನಂತರ ಡಿಸ್ಚಾರ್ಜ್ ಆಗಿದ್ದಾರೆ ಎಂದು ವರದಿ ತಿಳಿಸಿದೆ.
Team Udayavani, Mar 24, 2020, 8:52 PM IST
Representative Image
ಮುಂಬೈ:ಈಗಾಗಲೇ ಕೋವಿಡ್ 19 ಸೋಂಕು ಮಹಾಮಾರಿಗೆ ಗುರಿಯಾಗಿ ಐಸೋಲೇಶನ್ ನಲ್ಲಿದ್ದ ಹಲವಾರು ರೋಗಿಗಳು ಗುಣಮುಖರಾದ ನಂತರ ಮಂಗಳವಾರ ಮುಂಬೈ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದಾಖಲಾಗಿದ್ದ 12 ಮಂದಿ ಕೋವಿಡ್ 19 ಪೀಡಿತರಲ್ಲಿ 8 ಮಂದಿ ಗುಣಮುಖರಾದ ನಂತರ ಡಿಸ್ಚಾರ್ಜ್ ಆಗಿದ್ದಾರೆ ಎಂದು ವರದಿ ತಿಳಿಸಿದೆ.
ಕ್ವಾರಟೈನ್ ಹಾಗೂ ಐಸೋಲೇಶನ್ ಬಳಿಕ ಎಂಟು ಮಂದಿಯ ವರದಿ ನೆಗೆಟೀವ್ ಆಗಿರುವುದಾಗಿ ವರದಿ ತಿಳಿಸಿದೆ. ಇನ್ನುಳಿದ ನಾಲ್ಕು ಮಂದಿಯನ್ನು ಶೀಘ್ರವೇ ಡಿಸ್ಚಾರ್ಜ್ ಮಾಡಲಾಗುವುದು. ಅಲ್ಲದೇ ಇನ್ನೂ ಎರಡು ವಾರಗಳ ಕಾಲ ಇವರೆಲ್ಲರೂ ಹೋಮ್ ಕ್ವಾರಟೈನ್ ನಲ್ಲಿ ಇರಬೇಕಾಗಿದೆ ಎಂದು ವರದಿ ವಿವರಿಸಿದೆ.