ಸಿಎಂ ಆಗುತ್ತಲೇ ಠಾಕ್ರೆಗೆ ಟಕ್ಕರ್ ಕೊಟ್ಟ ಶಿಂಧೆ; ಮೆಟ್ರೋ ಯೋಜನೆ ಮತ್ತೆ ಆರೆ ಕಾಲೋನಿಗೆ

Team Udayavani, Jul 1, 2022, 11:31 AM IST

Eknath Shinde Reverses Big Uddhav Thackeray Decision

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ ಏಕನಾಥ್ ಶಿಂಧೆ ಅವರು ಮುಂಬೈನಲ್ಲಿ ವಿವಾದಾತ್ಮಕ ಮೆಟ್ರೋ ಕಾರ್ ಶೆಡ್ ಯೋಜನೆಗೆ ಸಂಬಂಧಿಸಿದಂತೆ ಉದ್ಧವ್ ಠಾಕ್ರೆ ಸರ್ಕಾರದ ನಿಲುವನ್ನು ಬದಲಾಯಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ

2019 ರಲ್ಲಿ ದೇವೇಂದ್ರ ಫಡ್ನವಿಸ್ ಸರ್ಕಾರದ ಅಡಿಯಲ್ಲಿ ಯೋಜಿಸಿದಂತೆ ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ನಿರ್ಮಿಸಲಾಗುವುದು ಎಂದು ನ್ಯಾಯಾಲಯದಲ್ಲಿ ದಾಖಲೆ ಸಲ್ಲಿಸುವಂತೆ ಏಕನಾಥ ಶಿಂಧೆ ಅವರು ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಅವರಿಗೆ ಸೂಚಿಸಿದ್ದಾರೆ ಎಂದು ಎನ್ ಡಿಟಿವಿ ವರದಿ ಮಾಡಿದೆ.

2019 ರಲ್ಲಿ ಈ ಮೆಟ್ರೋ ರೈಲು ಯೋಜನೆ ಮುಂಬೈನಲ್ಲಿ ಪರಿಸರ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆಯನ್ನು ಹುಟ್ಟುಹಾಕಿತ್ತು. ಮುಂಬೈನ ಹಸಿರು ಶ್ವಾಸಕೋಶ ಎಂದು ಕರೆಯಲ್ಪಡುವ ಆರೆ ಕಾಲೋನಿಯಲ್ಲಿ ಮರಗಳನ್ನು ಕಡಿಯಲು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ)ಗೆ ಮುಂಬೈ ಮೆಟ್ರೋ ರೈಲು ಕಾರ್ಪೊರೇಶನ್ ಅನುಮತಿಯನ್ನು ಕೋರಿತ್ತು. ಇದರಿಂದ ಮುಂಬೈನಲ್ಲಿ ಭಾರೀ ಪ್ರತಿಭಟನೆಗಳು ನಡೆದಿತ್ತು.

ಇದನ್ನೂ ಓದಿ:ದಾಖಲೆಯ ದೂರಕ್ಕೆ ಜಾವೆಲಿನ್ ಎಸೆದ ನೀರಜ್ ಚೋಪ್ರಾ; ಹೊಸ ದಾಖಲೆ ಬರೆದ ಚಿನ್ನದ ಹುಡುಗ| Video

ಕಾರ್ಯಕರ್ತರು ತಮ್ಮ ಆಂದೋಲನವನ್ನು ಹೆಚ್ಚಿಸುತ್ತಿದ್ದಂತೆ, ಅಂದಿನ ಮುಖ್ಯಮಂತ್ರಿ ಫಡ್ನವಿಸ್ ಅವರು ಮೆಟ್ರೋ ಕಾರ್ ಶೆಡ್‌ಗಾಗಿ ಗುರುತಿಸಲಾದ ಪ್ರದೇಶವನ್ನು ಜೀವವೈವಿಧ್ಯ ಅಥವಾ ಅರಣ್ಯ ಭೂಮಿ ಎಂದು ವರ್ಗೀಕರಿಸಲಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಅಲ್ಲದೆ ನಾವು ಮರಗಳನ್ನು ಸಂರಕ್ಷಿಸುವುದು ಇಂಗಾಲ ಕಡಿಮೆ ಮಾಡಲು. ನಾವು ಯೋಜಿಸಿರುವ ಮೆಟ್ರೋ ಯೋಜನೆಯಿಂದ ವಾಹನ ದಟ್ಟಣೆ ಕಡಿಮೆಯಾಗಿ ಇಂಗಾಲದ ಪ್ರಮಾಣ ಕುಂಠಿತವಾಗುತ್ತದೆ ಎಂದು ಫಡ್ನವೀಸ್ ಹೇಳಿದ್ದರು.

ಬಿಜೆಪಿ ಜೊತೆ ಮೃತ್ರಿಯಲ್ಲಿದ್ದ ಶಿವಸೇನೆ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಬಳಿಕ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಎನ್ ಸಿಪಿ ಜೊತೆ ಸರ್ಕಾರ ರಚಿಸಿದ ಶಿವಸೇನೆ, ಈ ಯೋಜನೆಯನ್ನು ಆರೆ ಕಾಲೋನಿಯಿಂದ ಕಂಜುರ್ಮಾರ್ಗ್ ಗೆ ಸ್ಥಳಾಂತರಿಸಿತ್ತು. ಅದರ ನಂತರ, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಈ ಭೂಮಿಯು ಭೂಮಿ ತನ್ನ ಲವಣ ಇಲಾಖೆಗೆ ಸೇರಿದ್ದು ಎಂದು ಹೇಳಿ 2020 ರಲ್ಲಿ ಬಾಂಬೆ ಹೈಕೋರ್ಟ್‌ಗೆ ಮೆಟ್ಟಿಲೇರಿತ್ತು. ಆಗ ಹೈಕೋರ್ಟ್ ಯೋಜನೆಗೆ ತಡೆಯಾಜ್ಞೆ ನೀಡಿತ್ತು. ಅಂದಿನಿಂದ ಈ ಯೋಜನೆ ನೆನೆಗುದಿಗೆ ಬಿದ್ದಿದೆ.

ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಅವರು ಮುಂಬೈ ಮೆಟ್ರೋ ಕೆಲಸವನ್ನು ಮತ್ತೆ ಟ್ರ್ಯಾಕ್‌ಗೆ ತರುವುದಾಗಿ ಟ್ವೀಟ್ ಮಾಡಿದ್ದಾರೆ. ಠಾಕ್ರೆ ಬಣದಿಂದ ಹೊರಬಂದ ಶಿಂಧೆ ಇದೀಗ ಠಾಕ್ರೆಗೆ ಟಕ್ಕರ್ ಕೊಡಲು ಹೊರಟಿದ್ದಾರೆ.

ಟಾಪ್ ನ್ಯೂಸ್

ನರ್ಸಿಂಗ್‌ ಕಾಲೇಜುಗಳ ಪರಿಶೀಲನೆ: ವಿಶೇಷ ಜಂಟಿ ಸದನ ಸಮಿತಿ ರಚನೆ ಎತ್ತಿ ಹಿಡಿದ ಹೈಕೋರ್ಟ್‌

ನರ್ಸಿಂಗ್‌ ಕಾಲೇಜುಗಳ ಪರಿಶೀಲನೆ: ವಿಶೇಷ ಜಂಟಿ ಸದನ ಸಮಿತಿ ರಚನೆ ಎತ್ತಿ ಹಿಡಿದ ಹೈಕೋರ್ಟ್‌

tdy-8

ಮೊಸರು ಕುಡಿಕೆ ಆಡುವವರಿಗೆ ಕ್ರೀಡಾ ಮೀಸಲಾತಿ!

ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಸರ್ಕಾರಿ ಪ್ರಾಯೋಜಿತ: ದಿನೇಶ್‌ ಗುಂಡೂರಾವ್‌

ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಸರ್ಕಾರಿ ಪ್ರಾಯೋಜಿತ: ದಿನೇಶ್‌ ಗುಂಡೂರಾವ್‌

TDY-5

ತೈವಾನ್‌ನೊಂದಿಗೆ ಅಮೆರಿಕ ವ್ಯಾಪಾರ ಒಪ್ಪಂದ

1-dsfsdf

ಸಕಲೇಶಪುರದಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯಗೆ ತಟ್ಟಿದ ಪ್ರತಿಭಟನೆ ಬಿಸಿ

 ದೇಶದ ಮೊದಲ ಇ-ಡಬಲ್‌ ಡೆಕ್ಕರ್‌ ಎ.ಸಿ. ಬಸ್‌ ಅನಾವರಣ

 ದೇಶದ ಮೊದಲ ಇ-ಡಬಲ್‌ ಡೆಕ್ಕರ್‌ ಎ.ಸಿ. ಬಸ್‌ ಅನಾವರಣ

tdy-2

ಶಾಲೆಗಳಲ್ಲಿ ಗಣೇಶ ಉತ್ಸವ ಬಿಜೆಪಿ ಸರ್ಕಾರ ರೂಪಿಸಿದ್ದಲ್ಲ: ಸಚಿವ ಬಿ.ಸಿ.ನಾಗೇಶ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-8

ಮೊಸರು ಕುಡಿಕೆ ಆಡುವವರಿಗೆ ಕ್ರೀಡಾ ಮೀಸಲಾತಿ!

 ದೇಶದ ಮೊದಲ ಇ-ಡಬಲ್‌ ಡೆಕ್ಕರ್‌ ಎ.ಸಿ. ಬಸ್‌ ಅನಾವರಣ

 ದೇಶದ ಮೊದಲ ಇ-ಡಬಲ್‌ ಡೆಕ್ಕರ್‌ ಎ.ಸಿ. ಬಸ್‌ ಅನಾವರಣ

ಸಿಇಯುಟಿ: ಎರಡನೇ ದಿನವೂ ಮುಂದುವರಿದ ಸಮಸ್ಯೆ

ಸಿಇಯುಟಿ: ಎರಡನೇ ದಿನವೂ ಮುಂದುವರಿದ ಸಮಸ್ಯೆ

ಮಗಳ ಬರ್ತ್‌ಡೇಗೆ 1 ಲಕ್ಷ ಪಾನಿ ಪುರಿ ಹಂಚಿಕೆ!

ಮಗಳ ಬರ್ತ್‌ಡೇಗೆ 1 ಲಕ್ಷ ಪಾನಿ ಪುರಿ ಹಂಚಿಕೆ!

ರೊಹಿಂಗ್ಯಾಗಳಿಗೆ ಫ್ಲ್ಯಾಟ್‌:ಅನುಮತಿ ಕೊಟ್ಟದ್ದು ಯಾರು?; ದೆಹಲಿ ಡಿಸಿಎಂ ಸಿಸೋಡಿಯಾ

ರೊಹಿಂಗ್ಯಾಗಳಿಗೆ ಫ್ಲ್ಯಾಟ್‌:ಅನುಮತಿ ಕೊಟ್ಟದ್ದು ಯಾರು?; ದೆಹಲಿ ಡಿಸಿಎಂ ಸಿಸೋಡಿಯಾ

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

ನರ್ಸಿಂಗ್‌ ಕಾಲೇಜುಗಳ ಪರಿಶೀಲನೆ: ವಿಶೇಷ ಜಂಟಿ ಸದನ ಸಮಿತಿ ರಚನೆ ಎತ್ತಿ ಹಿಡಿದ ಹೈಕೋರ್ಟ್‌

ನರ್ಸಿಂಗ್‌ ಕಾಲೇಜುಗಳ ಪರಿಶೀಲನೆ: ವಿಶೇಷ ಜಂಟಿ ಸದನ ಸಮಿತಿ ರಚನೆ ಎತ್ತಿ ಹಿಡಿದ ಹೈಕೋರ್ಟ್‌

tdy-8

ಮೊಸರು ಕುಡಿಕೆ ಆಡುವವರಿಗೆ ಕ್ರೀಡಾ ಮೀಸಲಾತಿ!

ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಸರ್ಕಾರಿ ಪ್ರಾಯೋಜಿತ: ದಿನೇಶ್‌ ಗುಂಡೂರಾವ್‌

ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಸರ್ಕಾರಿ ಪ್ರಾಯೋಜಿತ: ದಿನೇಶ್‌ ಗುಂಡೂರಾವ್‌

1re

ವಿದ್ಯಾರ್ಥಿಗಳ ಹೋರಾಟ ಯಶಸ್ವಿ: ವಾಡಿ ಇಂದಿರಾಗಾಂಧಿ ವಸತಿ ಶಾಲೆ ಸ್ಥಳಾಂತರ

ಮಹಾರಾಜ ಟಿ20: ಗುಲ್ಬರ್ಗಕ್ಕೆ ಜಯ

ಮಹಾರಾಜ ಟಿ20: ಗುಲ್ಬರ್ಗಕ್ಕೆ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.