ಎಟಿಎಂ ನಗದು ಕೊರತೆಗೆ ಚುನಾವಣೆ ಕಾರಣ?

Team Udayavani, Apr 22, 2018, 6:00 AM IST

ಬೆಂಗಳೂರು/ಹೊಸದಿಲ್ಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೂ ದೇಶದ ವಿವಿಧ ಭಾಗಗಳಲ್ಲಿ ಉಂಟಾಗಿದ್ದ ಎಟಿಎಂಗಳಲ್ಲಿನ ನಗದು ಕೊರತೆಗೂ ಸಂಬಂಧ ಇರುವ ಅಂಶವನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಪತ್ತೆ ಹಚ್ಚಿದೆ. ಇದರ ಹೊರತಾಗಿಯೂ ಈ ಮಾಹಿತಿಯನ್ನು ಮತ್ತಷ್ಟು ಖಚಿತಪಡಿಸುವ ನಿಟ್ಟಿನಲ್ಲಿ ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆಯ ಕರ್ನಾಟಕ ಮತ್ತು ಗೋವಾ ವಿಭಾಗಕ್ಕೆ ಸೂಚಿಸಿದೆ.

ಚುನಾವಣೆ ಪ್ರಕಟವಾದ ದಿನದಿಂದ (ಮಾ. 27) ಇದುವರೆಗೆ ಆದಾಯ ತೆರಿಗೆ ಇಲಾಖೆ 4.13 ಕೋಟಿ ರೂ. ನಗದನ್ನು ವಶ
ಪಡಿಸಿಕೊಂಡಿದೆ. ಈ ಪೈಕಿ 2 ಸಾವಿರ ರೂ. ಮತ್ತು 500 ರೂ. ಮುಖಬೆಲೆಯ ನೋಟುಗಳೇ ಶೇ.97ರಷ್ಟಿವೆ. ಜತೆಗೆ 1.32 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶನಿವಾರ ದಿಲ್ಲಿಯಲ್ಲಿ ಸಿಬಿಡಿಟಿ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲೇ ಹೆಚ್ಚು 
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಗದು ವಶಪಡಿಸಿಕೊಳ್ಳಲಾಗಿದ್ದರೂ ಈ ಪಟ್ಟಿಯಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ಅಲ್ಲಿ 2.17 ಕೋಟಿ ರೂ. ನಗದು ವಶಕ್ಕೆ ಪಡೆಯಲಾಗಿದೆ. ಬಳ್ಳಾರಿಯಲ್ಲಿ 55 ಲಕ್ಷ ರೂ. ವಶಪಡಿಸಿಕೊಳ್ಳುವ ಮೂಲಕ ಎರಡನೇ ಸ್ಥಾನದಲ್ಲಿದೆ. ಮತದಾರರಿಗೆ ನೀಡಲು ಉದ್ದೇಶಿಸ ಲಾಗಿತ್ತು ಎಂದು ಹೇಳಲಾಗಿರುವ 9.51 ಕೋಟಿ ರೂ. ಮೌಲ್ಯದ ವಿವಿಧ ಗೃಹೋಪ ಯೋಗಿ ವಸ್ತುಗಳನ್ನೂ ಐ.ಟಿ. ಇಲಾಖೆ ಪತ್ತೆಹಚ್ಚಿದೆ. ಅವುಗಳನ್ನು ಮೈಸೂರಿನ ಗೋದಾಮಿನಲ್ಲಿ ಇರಿಸಲಾಗಿತ್ತು. ಈ ಬಗ್ಗೆ ಮೈಸೂರು ಜಿಲ್ಲಾ ಚುನಾವಣಾಧಿಕಾರಿಯ ಗಮನಕ್ಕೆ ತಂದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಸಿಬಿಡಿಟಿ ಹೇಳಿದೆ.

ಗಸ್ತು ಬಿಗಿ 
ಕರ್ನಾಟಕದ ವಿವಿಧ ವಿಮಾನ ನಿಲ್ದಾಣಗಳ ಜತೆಗೆ, ಗೋವಾದ ಏರ್‌ಪೋರ್ಟ್‌ಗಳಲ್ಲಿಯೂ ತಪಾಸಣೆ ಬಿಗಿಗೊಳಿಸಲಾಗಿದೆ. ಜತೆಗೆ 24 ಗಂಟೆಗಳ ಕಾಲ ದೂರು ಸ್ವೀಕರಿಸುವ ವ್ಯವಸ್ಥೆಯನ್ನು ಆದಾಯ ತೆರಿಗೆ ಬೆಂಗಳೂರಿನಲ್ಲಿ ಮಾಡಿದೆ ಎಂದಿದೆ ಸಿಬಿಡಿಟಿ. ಆದಾಯ ತೆರಿಗೆ ಇಲಾಖೆ ಸಹಾಯವಾಣಿ ಕೇಂದ್ರ ಟೋಲ್‌ ಫ್ರೀ ನಂ.: 18004252115,
cleankarnatakaelection @incometax.gov.in

ಪತ್ತೆಯಾದ ಗಂಟು
4.13 ಕೋಟಿ ರೂ. ವಶಪಡಿಸಿಕೊಂಡ ಒಟ್ಟು  ನಗದು
4.52 ಕಿಲೋ ಗ್ರಾಂ ವಶಪಡಿಸಿಕೊಂಡ ಒಟ್ಟು  ಚಿನ್ನಾಭರಣ
1.32 ಕೋಟಿ ರೂ.ವಶಪಡಿಸಿಕೊಂಡ ಆಭರಣ ಮೌಲ್ಯ

ಹೆಚ್ಚು ನಗದು ವಶಪಡಿಸಿಕೊಂಡ ಸ್ಥಳಗಳು
2.17 ಕೋಟಿ ರೂ. ಬೆಂಗಳೂರು ನಗರ
55 ಲಕ್ಷ ರೂ. ಬಳ್ಳಾರಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕೋಲಾರ: ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಮಾಲೂರಿನ ಶಾಸಕ ಕೆ.ವೈ.ನಂಜೇಗೌಡ ಎರಡನೇ ಬಾರಿಗೆ ಅವಿರೋಧ ಆಯ್ಕೆಯಾದರು. ಸಚಿವ ಕೃಷ್ಣಬೈರೇಗೌಡರು...

  • ಬಾಲಪ್ಪ ಎಂ. ಕುಪ್ಪಿ ಕಕ್ಕೇರಾ: ನಗರೋತ್ಥಾನ ಯೋಜನೆಯಡಿ ಕಕ್ಕೇರಾ ಪ್ರಮುಖ ವಾರ್ಡ್‌ಗಳಲ್ಲಿ 3ನೇ ಹಂತದ ಕುಡಿಯುವ ನೀರಿನ ಸೌಕರ್ಯ ಒದಗಿಸಲು ನಗರಾಭಿವೃದ್ಧಿ ಕೋಶ...

  • ಕೋಲಾರ: ರಾಜ್ಯದ ಸಮ್ಮಿಶ್ರ ಸರ್ಕಾರ ಮಾಡಿದ ಜನಪರ ಕೆಲಸಗಳನ್ನು ಜನರಿಗೆ ತಿಳಿಸುವಲ್ಲಿ ಆದ ವೈಫ‌‌ಲ್ಯವೇ ಲೋಕಸಭಾ ಚುನಾವಣೆಯ ಹಿನ್ನಡೆಗೆ ಕಾರಣವಾಯಿತು ಎಂದು ಜಿಲ್ಲಾ...

  • ದೇವದುರ್ಗ: ದೇವದುರ್ಗ ಪಟ್ಟಣ ಸೇರಿ ತಾಲೂಕಿನಾದ್ಯಂತ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚುತ್ತಿವೆ. ಅಕ್ರಮ ಮರಳು ಸಾಗಾಟ, ಜೂಜಾಟ, ಮಟ್ಕಾ, ಅಕ್ರಮ ಮದ್ಯ ಮಾರಾಟ,...

  • ಭಟ್ಕಳ: ತಾಲೂಕಿನ ಮುಟ್ಟಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಹೊಳೆಯ ಪಕ್ಕದಲ್ಲಿ ಗುಂಡಿ ತೋಡಿ ನೀರು ಸರಬರಾಜು ಮಾಡುತ್ತಿರುವ ಖಾಸಗಿ ವ್ಯಕ್ತಿ ವಿರುದ್ಧ ಗ್ರಾಮಸ್ಥರು...

  • ತಾಳಿಕೋಟೆ: ತಾಲೂಕಿನ ಮೂಕಿಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮೂಕಿಹಾಳ ದರ್ಗಾದ ಬಳಿ ಇರುವ ನಿವಾಸಿಗಳಿಗೆ ನದಿಯಿಂದ ವಾರಕ್ಕೊಮ್ಮೆ ಪೂರೈಕೆಯಾಗುವ ನೀರು ಕಲುಷಿತವಾಗಿದ್ದು...