ಬಡಗಾಂವ್ ಎನ್ಕೌಂಟರ್: 3 ಜೆಇಎಂ ಉಗ್ರರ ಅಡಗುದಾಣ ಪತ್ತೆ
Team Udayavani, Nov 30, 2017, 12:35 PM IST
ಶ್ರೀನಗರ : ಜಮ್ಮು ಕಾಶ್ಮೀರದ ಬಡಗಾಂವ್ ಜಿಲ್ಲೆಯಲ್ಲಿ ಇಂದು ಗುರುವಾರ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎನ್ಕೌಂಟರ್ ನಡೆಯುತ್ತಿದೆ.
ಉಭಯತರ ಗುಂಡಿನ ಚಕಮಕಿಯಲ್ಲಿ ಹದಿಹರೆಯದ ತರುಣನೋರ್ವ ಗಾಯಗೊಂಡಿರುವುದಾಗಿ ವರದಿಯಾಗಿದೆ
ಕನಿಷ್ಠ ಇಬ್ಬರು ಅಥವಾ ಮೂವರು ಜೈಶ್ ಎ ಮೊಹಮ್ಮದ್ ಉಗ್ರರು ಜಿಲ್ಲೆಯ ಪಖೀರ್ಪುರ ಪ್ರದೇಶದ ಫುತ್ಲಿಪೋರಾ ಎಂಬಲ್ಲಿ ಅಡಗಿಕೊಂಡಿದ್ದು ಸೇನೆ, ಸಿಆರ್ಪಿಎಫ್ ಮತ್ತು ಬಡಗಾಂವ್ ಪೊಲೀಸರು ಅವರನ್ನು ಸುತ್ತುವರಿದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕಾರ್ಯಾಚರಣೆ ಈಗಲೂ ಮುಂದುವರಿದಿದ್ದು ಹೆಚ್ಚಿನ ವಿವರಗಳನ್ನು ಎದುರು ನೋಡಲಾಗುತ್ತಿದೆ.