ಅಧಿಕ ಪಿಂಚಣಿ ಜಾರಿ: ಇಪಿಎಫ್ಒ ಮಾರ್ಗಸೂಚಿ ಬಿಡುಗಡೆ
Team Udayavani, Dec 30, 2022, 8:15 PM IST
ನವದೆಹಲಿ: ಪಿಂಚಣಿ ಹೆಚ್ಚಳಕ್ಕೆ ಸಂಬಂಧಿಸಿ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಹೊರಡಿಸಿದ್ದ ಆದೇಶವನ್ನು ಅನುಷ್ಠಾನ ಮಾಡುವಂತೆ ಸೂಚಿಸಿ ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) ತನ್ನ ಎಲ್ಲ ಕ್ಷೇತ್ರಾಧಿಕಾರಿಗಳಿಗೆ ಸುತ್ತೋಲೆ ರವಾನಿಸಿದೆ.
ಅಧಿಕ ಪಿಂಚಣಿಗೆ ಅರ್ಹರಾದ ನೌಕರರು ಯಾರು, ಅಗತ್ಯವಿರುವ ದಾಖಲೆಗಳು ಯಾವುವು ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗಿರಬೇಕು ಎಂಬಿತ್ಯಾದಿ ವಿವರಗಳನ್ನು ಒಳಗೊಂಡ ಮಾರ್ಗಸೂಚಿಯನ್ನೂ ಇಪಿಎಫ್ಒ ಬಿಡುಗಡೆ ಮಾಡಿದೆ. ಜತೆಗೆ 8 ವಾರಗಳ ಒಳಗಾಗಿ ಸುಪ್ರೀಂ ಆದೇಶವನ್ನು ಜಾರಿ ಮಾಡುವಂತೆಯೂ ಸೂಚಿಸಲಾಗಿದೆ.
ಇಪಿಎಫ್ ಯೋಜನೆಯನ್ವಯ ಯಾರು ಅಧಿಕ ವೇತನವನ್ನು ಪಿಎಫ್ಗೆ ನೀಡಿರುತ್ತಾರೋ, ಅವರು ಅಧಿಕ ಪಿಂಚಣಿಗೆ ಅರ್ಹರಾಗುತ್ತಾರೆ. ಜತೆಗೆ, ತಮ್ಮ ನಿವೃತ್ತಿಗೂ ಮೊದಲೇ “ಅಧಿಕ ಪಿಂಚಣಿ’ ಆಯ್ಕೆಯನ್ನು ಆಯ್ದುಕೊಂಡಿದ್ದರೂ, ಅವರ ಕೋರಿಕೆಯನ್ನು ಇಪಿಎಫ್ಒ ತಿರಸ್ಕರಿಸಿದ್ದರೆ ಅಂಥವರು ಈ ಸೌಲಭ್ಯಕ್ಕೆ ಅರ್ಹರಾಗುತ್ತಾರೆ.
ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲೊಂದು ಮಾದಕ ವಸ್ತು ಮಾರಾಟ ಮಳಿಗೆ! ಇದು ಸರ್ಕಾರದಿಂದಲೇ ಪರವಾನಗಿ ಹೊಂದಿರುವ ಮೊದಲ ಮಳಿಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!