SBI ಎಟಿಎಂನಿಂದಲೇ ಬಂತು 2000 ಸಾವಿರ ರೂ. ನಕಲಿ ನೋಟು!
Team Udayavani, Feb 22, 2017, 4:51 PM IST
ನವದೆಹಲಿ: ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂನಲ್ಲಿ ಹಣ ತೆಗೆದುಕೊಳ್ಳಲು ಹೆಣಗಾಡುತ್ತಿದ್ದರೆ, ಮತ್ತೊಂದೆಡೆ ಎಸ್ ಬಿಐ ಎಟಿಎಂನಿಂದಲೇ 2000 ಸಾವಿರ ರೂಪಾಯಿ ನಕಲಿ ನೋಟು ಬಂದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ನಮೂದಾಗಿರುವ ಸ್ಥಳದಲ್ಲಿ ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಅಂತ ಬರೆಯಲಾಗಿದೆ! ಅಷ್ಟೇ ಅಲ್ಲ ಭಾರತೀಯ ಮನೋರಂಜನ್ ಬ್ಯಾಂಕ್ ಎಂದು ನೋಟಿನಲ್ಲಿ ನಮೂದಿಸಿದ್ದು, ಸೀರಿಯಲ್ ನಂಬರ್ 000000 ಎಂಬುದಾಗಿದೆ. ಆರ್ ಬಿಐ ಚಿಹ್ನೆ ಬದಲು ಪಿಕೆ ಚಿಹ್ನೆ ಎಂದು ಅಚ್ಚು ಹಾಕಲಾಗಿದೆ.
ರೋಹಿತ್ ಎಂಬವರು ಫೆಬ್ರುವರಿ 6ರಂದು ಎಸ್ ಬಿಐ ಎಟಿಎಂಗೆ ಹೋಗಿ 8 ಸಾವಿರ ರೂಪಾಯಿ ವಿತ್ ಡ್ರಾ ಮಾಡಿದ್ದರು. ಆದರೆ ವಿತ್ ಡ್ರಾ ಮಾಡಿದ್ದ 2 ಸಾವಿರ ಮುಖಬೆಲೆಯ 4 ನೋಟುಗಳೂ ನಕಲಿ ಎಂದು ಆರೋಪಿಸಿದ್ದಾರೆ. ನೋಟುಗಳಲ್ಲಿ ಹಲವಾರು ದೋಷಗಳಿರುವುದನ್ನು ಪತ್ತೆ ಹಚ್ಚಿದ್ದರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!