ಮುಂಬಯಿ : ಮೋಟಾರ್ ಸೈಕಲ್ ಕೋಚ್ ಚೇತನಾ ಪಂಡಿತ್ ಆತ್ಮಹತ್ಯೆ
Team Udayavani, Jul 11, 2018, 5:06 PM IST
ಮುಂಬಯಿ : ಮೋಟಾರ್ ಸೈಕಲ್ ಕೋಚ್ ಆಗಿ ಪ್ರಸಿದ್ಧಿ ಪಡೆದಿದ್ದ ಚೇತನಾ ಪಂಡಿತ್ ಅವರು ಇಲ್ಲಿನ ಗೋರೇಗಾಂವ್ನ ತನ್ನ ನಿವಾಸದಲ್ಲಿ ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯಲ್ಲಿನ ಸೀಲಿಂಗ್ ಫ್ಯಾನಿಗೆ ದುಪಟ್ಟಾ ಬಳಸಿಕೊಂಡು ನೇಣು ಹಾಕಿಕೊಂಡು ಚೇತನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದಿಂಡೋಷಿ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ರಾಜಾರಾಮ್ ವನಮಾನೆ ಇಂದು ಬುಧವಾರ ತಿಳಿಸಿದ್ದಾರೆ.
ಚೇತನಾ ಮನೆಯಲ್ಲಿ ಡೆತ್ ನೋಟ್ ಸಿಕ್ಕಿದೆ. “ನಾನು ತುಂಬಾ ಮಹತ್ವಾಕಾಂಕ್ಷಿ ಮಹಿಳೆ; ಆದರೆ ಜೀವನದ ಗುರಿ ಸಾಧಿಸಲು ನನಗೆ ಸಾಧ್ಯವಾಗಿಲ್ಲ. ಆದುದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ; ನನ್ನ ಸಾವಿಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಬಾರದು’ ಎಂದು ಚೇತನಾ ಡೆತ್ ನೋಟಿನಲ್ಲಿ ಬರೆದಿದ್ದಾರೆ.
ಚೇತನಾ ಅವರು ಮಹಿಳೆಯರಿಗೆ ರಾಯಲ್ ಎನ್ಫೀಲ್ಡ್ ಮೋಟಾರ್ ಸೈಕಲ್ ಬಿಡುವುದನ್ನು ಕಲಿಸುವುದರಲ್ಲಿ ನಿಷ್ಣಾತರಾಗಿದ್ದರು. ಎನ್ಫೀಲ್ಡ್ ರೈಡರ್ಸ್ ಮೋಟರ್ಸೈಕಲ್ ಟೂರಿಂಗ್ ಕಂಪೆನಿ ಸೇರಿದ ಮೊದಲ ಮಹಿಳೆ ಅವರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ