ದಲಿತ ಮಹಿಳೆಯರ ಹಲ್ಲೆ: ಬಿಜೆಪಿ ಶಾಸಕನ ವಿರುದ್ಧ ಎಫ್ಐಆರ್
Team Udayavani, Mar 12, 2018, 4:26 PM IST
ಡೆಹರಾಡೂನ್: ಉತ್ತರಾಖಂಡದ ರುದ್ರಪುರ ಶಾಸಕ ರಾಜ್ ಕುಮಾರ್ ತುಕ್ರಾಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ; ಮೂವರು ದಲಿತ ಮಹಿಳೆಯರ ಮೇಲೆ ಹಲ್ಲೆ ಮಾಡಿ ಅವರನ್ನು ನಿಂದಿಸಿದ ಆರೋಪ ತುಕ್ರಾಲ್ ಮೇಲಿದೆ.
ಎರಡು ಕುಟುಂಬಗಳ ನಡುವಿನ ಜಗಳವನ್ನು ಇತ್ಯರ್ಥ ಪಡಿಸಲು ಕಳೆದ ಮಾರ್ಚ್ 9ರಂದು ಶಾಸಕ ತುಕ್ರಾಲ್ ರಾಜಿ ಮಾತುಕತೆಗೆ ಹೋಗಿದ್ದಾಗ ಮಾತಿನ ಜಗಳದ ಪರಾಕಾಷ್ಠೆಯಲ್ಲಿ ಶಾಸಕ ತುಕ್ರಾಲ್, ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳ ಮೇಲೆ ಹಲ್ಲೆ ನಡೆಸಿದರೆಂಬ ದೂರನ್ನು ದಾಖಲಿಸಲಾಗಿತ್ತು. ಆ ಪ್ರಕಾರ ತುಕ್ರಾಲ್ ವಿರುದ್ಧ ರುದ್ರಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಈ ನಡುವೆ ಶಾಸಕರು ಹಲ್ಲೆ ಮಾಡಿದರೆಂಬ ವಿಡಿಯೋ ಒಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ