ಶಿಕ್ಷಕಿಯೊಂದಿಗೆ ಸಲಿಂಗ ಸಂಬಂಧ: ಮಗಳಿಂದ ತಾಯಿಯ ಹತ್ಯೆ
Team Udayavani, Mar 12, 2018, 3:58 PM IST
ಹೊಸದಿಲ್ಲಿ : ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ 35 ವರ್ಷ ಪ್ರಾಯದ ತನ್ನ ಶಿಕ್ಷಕಿಯೊಂದಿಗೆ ತಾನು ಹೊಂದಿರುವ ‘ಸಲಿಂಗ ಸಂಬಂಧ’ ವನ್ನು ಆಕ್ಷೇಪಿಸಿದ ತನ್ನ 38ರ ಹರೆಯದ ತಾಯಿಯ ಮೇಲೆ ಕಬ್ಬಿಣದ ರಾಡ್ ಮತ್ತು ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಆಕೆಯನ್ನು ಕೊಂದ 18 ವರ್ಷ ಪ್ರಾಯದ ಮಗಳನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಹಿಂದುಸ್ಥಾನ್ ಟೈಮ್ಸ್ ವರದಿಯ ಪ್ರಕಾರ ಮಗಳು ತನ್ನ ತಾಯಿಯನ್ನು ಕೊಂದ ಘಟನೆ ಮಾರ್ಚ್ 9ರಂದು ನಡೆದಿದೆ. ತನ್ನ ಮಹಿಳಾ ಶಿಕ್ಷಕಿಯೊಂದಿಗೆ “ಸಲಿಂಗ ಸಂಬಂಧ’ ಹೊಂದಿದ್ದ 11ನೇ ತರಗತಿಯಲ್ಲಿ ಓದುತ್ತಿರುವ ಹುಡುಗಿಯು ಓಡಿ ಹೋಗಲು ಬಯಸಿದ್ದಳು ಎಂದು ವರದಿ ತಿಳಿಸಿದೆ.
ಮಗಳಿಂದ ತಾಯಿಯ ಹತ್ಯೆ ನಡೆದ ಈ ಪ್ರಕರಣದಲ್ಲಿ ಮೃತಳ ಪತಿ, 44ರ ಹರೆಯದ ಟ್ರಾನ್ಸ್ಪೊàರ್ಟರ್ ಸತೀಶ್ ಕುಮಾರ್ ನೀಡಿದ ದೂರಿನ ಪ್ರಕಾರ ಪೊಲೀಸರು ಈ ದಂಪತಿಯ ಮಗಳನ್ನು ಬಂಧಿಸಿ ಆಕೆಯ ವಿರುದ್ಧ ಸೆ.304ರ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ.
ಹಿಂದೊಮ್ಮೆ ಈ ಹುಡುಗಿಯು ಆಗ 38ರ ಹರೆಯದವಳಾಗಿದ್ದ ತನ್ನ ಶಿಕ್ಷಕಿಯೊಂದಿಗೆ ಮನೆ ಬಿಟ್ಟು ಓಡಿ ಹೋಗಿದ್ದಳು. ಆದರೆ ಪ್ರಾಯಪ್ರಬುದ್ಧೆಯಾಗಿರದ ಕಾರಣಕ್ಕೆ ಆಕೆಯನ್ನು ಪೊಲೀಸರು ಹಿಡಿದು ಹೆತ್ತವರಿಗೆ ಒಪ್ಪಿಸಿದ್ದರು.
ಹುಡುಗಿಯ ತಂದೆ ಸತೀಶ್ ಕುಮಾರ್ ಅವರು ಶಿಕ್ಷಕಿ ವಿರುದ್ಧ ಕೊಲೆ ಚಿತಾವಣೆಗಾಗಿ ಕವಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ