ಎರಡೂ ಲಸಿಕೆ ಪಡೆದಂತಹ ಪ್ರವಾಸಿಗರಿಗೆ ಮಾತ್ರ ಗೋವಾ ಪ್ರವೇಶ : ಪ್ರಮೋದ ಸಾವಂತ್
Team Udayavani, Jun 28, 2021, 5:20 PM IST
ಪಣಜಿ: ಗೋವಾದಲ್ಲಿ ಪ್ರವಾಸೋದ್ಯಮ ಆರಂಭಗೊಂಡ ನಂತರ ಕೋವಿಡ್ನ ಎರಡೂ ಲಸಿಕೆ ಪಡೆದಂತಹ ಪ್ರವಾಸಿಗರಿಗೆ ಮಾತ್ರ ಗೋವಾ ಪ್ರವೇಶಾವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.
ಪಣಜಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು- ರಾಜ್ಯದಲ್ಲಿ ಪ್ರವಾಸೋದ್ಯಮ ಆರಂಭಿಸಿದ ನಂತರ ಪ್ರವಾಸಿಗರಿಗೆ ಕೋವಿಡ್ ಎರಡೂ ಲಸಿಕೆ ಖಡ್ಡಾಯಗೊಳಿಸಲಾಗುವುದು. ಪೂರ್ಣ ಪ್ರಮಾಣದ ಲಸಿಕೆ ಪಡೆದವರು ಮಾತ್ರ ರಾಜ್ಯಕ್ಕೆ ಪ್ರವೇಶಿಸಲು ಆರ್ಟಿಪಿಸಿಆರ್ ನೆಗೆಟಿವ್ ಪ್ರಮಾಣಪತ್ರ ತರುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಾವಂತ್ ನುಡಿದರು.
ಗೋವಾದಲ್ಲಿ ಶೇ 100 ರಷ್ಟು ಜನರಿಗೆ ಕೋವಿಡ್ನ ಮೊದಲ ಲಸಿಕೆ ನೀಡುವ ವರೆಗೂ ರಾಜ್ಯ ಪ್ರವಾಸೋದ್ಯಮ ಚಟುವಟಿಕೆ ಆರಂಭಿಸಲಾಗುವುದಿಲ್ಲ. ಕೋವಿಡ್-19 ಎರಡನೇಯ ಅಲೆಯಿಂದಾಗಿ ರಾಜ್ಯದಲ್ಲಿ ವಿವಿಧ ಉದ್ಯಮ ಬಂದ್ ಆಗಿದೆ, ಪ್ರವಾಸೋದ್ಯಮ ಅವಲಂಭಿತವಾಗಿರುವ ಕರಾವಳಿ ರಾಜ್ಯದ ಆರ್ಥಿಕತೆಯ ಮೇಲೆ ಹೆಚ್ಚು ಪರಿಣಾಮವುಂಟಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು