ವಿಜಯ ಮಲ್ಯ ಗಡೀಪಾರಿಗೆ ಯು.ಕೆ. ಒಪ್ಪೋದು ಕಷ್ಟ
Team Udayavani, Feb 11, 2017, 3:45 AM IST
ಲಂಡನ್/ಬೆಂಗಳೂರು: ಉದ್ಯಮಿ ವಿಜಯ ಮಲ್ಯರನ್ನು ಗಡೀಪಾರು ಮಾಡುವಂತೆ ಕೇಂದ್ರ ಸರ್ಕಾರ ಯುನೈಟೆಡ್ ಕಿಂಗ್ಡಮ್ಗೆ ದಾಖಲೆಗಳನ್ನು ಗುರುವಾರ ಹಸ್ತಾಂತರಿಸಿದೆ.
ಆದರೆ ಅಲ್ಲಿನ ಸರ್ಕಾರ ಅವರನ್ನು ಭಾರತಕ್ಕೆ ಗಡೀಪಾರು ಮಾಡುವ ಇರಾದೆಯೇನೂ ಕಾಣುತ್ತಿಲ್ಲ. ಕಳೆದ ವರ್ಷ ಬ್ರಿಟನ್ ಪ್ರಧಾನಿ ಥೆರೇಸಾ ಮೇ ಭಾರತ ಪ್ರವಾಸ ಕೈಗೊಂಡಿದ್ದ ಹಾಗೂ ಹಿಂದಿನ ಪ್ರಧಾನಿ ಡೇವಿಡ್ ಕ್ಯಾಮರಾನ್ ಪ್ರಧಾನಿಯಾಗಿದ್ದಾಗಲೂ ಮಲ್ಯರ ಗಡೀಪಾರು ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದರು. ಆದರೂ ಧನಾತ್ಮಕ ಫಲಿತಾಂಶವೇನೂ ಕಂಡು ಬಂದಿರಲಿಲ್ಲ.
ಭಾರತದ ಅತಿದೊಡ್ಡ ಬಿಯರ್ ತಯಾರಕ ಕಂಪನಿ ಯುನೈಟೆಡ್ ಬ್ರಿàವರೀಸ್ನಲ್ಲಿರುವ ಮದ್ಯದ ದೊರೆ ವಿಜಯ ಮಲ್ಯ ಅವರ ಶೇ.11ರಷ್ಟು ಷೇರುಗಳನ್ನು ಖರೀದಿಸಲು ಡಚ್ ಕಂಪನಿ ಹೆನ್ಕೆನ್ ಮುಂದಾಗಿದೆ. ಯುಬಿ ಕಂಪನಿಯು ವಿಜಯ ಮಲ್ಯರನ್ನು ಮುಖ್ಯಸ್ಥ ಸ್ಥಾನದಿಂದ ವಜಾ ಮಾಡಿದ ಮಾರನೇ ದಿನವೇ ಈ ಬೆಳವಣಿಗೆ ನಡೆದಿದೆ.