ಜಿಎಸ್‌ಟಿ ಪ್ರಭಾವಳಿ: ರೈಲು, ವಿಮಾನ ತುಟ್ಟಿ,ಕ್ಯಾಬ್‌, ಬಸ್‌ ಆರಾಮ


Team Udayavani, Jun 28, 2017, 3:45 AM IST

gst.jpg

ನವದೆಹಲಿ: ಇನ್ನೇನು ಮೂರೇ ದಿನ. ಬಹು ನಿರೀಕ್ಷಿತ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಜಾರಿಯಾಗಲಿದೆ. ಪ್ರಯಾಣ ಕ್ಷೇತ್ರಕ್ಕೆ ಸಂಬಂಧಿಸಿದ ವಿಮಾನ ಮತ್ತು ರೈಲಿನ ಕೆಲ ಟಿಕೆಟ್‌ಗಳು ಕೊಂಚ ಕೈಸುಡಲಿದ್ದರೆ, ಕ್ಯಾಬ್‌ ಮತ್ತು ಬಸ್‌ ಪ್ರಯಾಣ ದರ ಹಗುರ ಎನಿಸೀತು.

ವಿಮಾನ ಯಾನ: ಇಕಾನಮಿ ದರ್ಜೆಯ ವಿಮಾನದ ಟಿಕೆಟ್‌ ಹೊಂದಿರುವವರಿಗೆ ಸಮಸ್ಯೆ ಇರಲಾರದು. ಏಕೆಂದರೆ ಸದ್ಯದ ಟಿಕೆಟ್‌ ವ್ಯವಸ್ಥೆಯಲ್ಲಿ ಶೇ.6ರಷ್ಟು ಇರುವ ತೆರಿಗೆ ವ್ಯವಸ್ಥೆ ಶೇ.5ಕ್ಕೆ ಇಳಿಕೆಯಾಗಿದೆ. ಆದರೆ ಬ್ಯುಸಿನೆಸ್‌ ಕ್ಲಾಸ್‌ನ ಪ್ರಯಾಣ ದರ ಹಾಲಿ ಶೇ.9ರಿಂದ ಶೇ.12ಕ್ಕೆ ಪರಿಷ್ಕರಣೆ ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ವಿಮಾನಯಾನ ಕೂಡ ದುಬಾರಿಯಾಗಲಿದೆ. ವಿಶೇಷವಾಗಿ ಒಂದು ನಿಗದಿತ ಸ್ಥಳದಿಂದ ತಂಗುವಿಕೆ ಇಲ್ಲದೆ ಮತ್ತೂಂದು ದೇಶದ ಸ್ಥಳಕ್ಕೆ ಹೋಗುವ ವಿಮಾನದ ಟಿಕೆಟ್‌ ದುಬಾರಿಯಾಗುತ್ತದೆ. ಉದಾಹರಣೆಗೆ ವಿವರಿಸುವುದಿದ್ದರೆ ದೆಹಲಿಯಿಂದ ದುಬೈ ಮೂಲಕ ಅಮೆರಿಕ್ಕೆ ಹೋಗುವುದಿದ್ದರೆ ಟಿಕೆಟ್‌ ತುಂಬಾ ದುಬಾರಿ ಅನಿಸುವುದಿಲ್ಲ. ಆದರೆ ಏರ್‌ ಇಂಡಿಯಾ ಸೇರಿದಂತೆ ಪ್ರಮುಖ ಸಂಸ್ಥೆಗಳ ವಿಮಾನಗಳು ನೇರ ಸಂಪರ್ಕ ಹೊಂದಿವೆ.

ಏಕಾಏಕಿ ಪ್ರಯಾಣ ಕೂಡ ಕಷ್ಟವಾದೀತು: ಮುಂದಿನ ತಿಂಗಳ 1 ರ ಬಳಿಕ ಏಕಾಏಕಿ ವಿಮಾನದಲ್ಲಿ ಪ್ರಯಾಣ ಮಾಡುವುದರ ಬಗ್ಗೆ ನಿರ್ಧರಿಸಿದರೆ, ಅದು ಕೂಡ ಕಷ್ಟವೇ. ಏಕೆಂದರೆ ಹೆಚ್ಚಿನವರು ಮುಂಚಿತವಾಗಿಯೇ ಟಿಕೆಟ್‌ ಕಾಯ್ದಿರಿಸುವುದರಿಂದ ಈ ಬೆಳವಣಿಗೆ ಸಾಧ್ಯವಿದೆ ಎಂದು ಹೇಳಲಾಗುತ್ತಿದೆ.

ಎ.ಸಿ, ಪ್ರಥಮ ದರ್ಜೆ ಕಾಸ್ಟಿ: ಭಾರತೀಯ ರೈಲ್ವೆಯ ಎ.ಸಿ ಮತ್ತು ಫ‌ರ್ಸ್ಡ್ ಕ್ಲಾಸ್‌ ಪ್ರಯಾಣಕ್ಕೆ ಕ್ರಮವಾಗಿ ಶೇ.4.5 ರಿಂದ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತದೆ. ಆದರೆ ನಾನ್‌ ಎಸಿ, ಸ್ಥಳೀಯ ರೈಲುಗಳ ಪ್ರಯಾಣ, ಮೆಟ್ರೋ ಮತ್ತು ಧಾರ್ಮಿಕ ಕ್ಷೇತ್ರಗಳ ಪ್ರಯಾಣದ ಟಿಕೆಟ್‌ಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.

ಕ್ಯಾಬ್‌ ಆರಾಮ : ಆರಾಮವಾಗಿ ಕ್ಯಾಬ್‌ನಲ್ಲಿ ಹೋಗೋಣ ಎಂದುಕೊಂಡರೆ ಅದು ಅನುಕೂಲವೇ ಆದೀತು.  ಓಲಾ ಅಥವಾ ಯೂಬರ್‌ ಕಂಪನಿಯ ಕ್ಯಾಬ್‌ಗಳಲ್ಲಿ ಪ್ರಯಾಣ ಮಾಡುವುದು ಹಿತವೆನಿಸೀತು. ಅದಕ್ಕೆ ಸಂಬಂಧಿಸಿದ ತೆರಿಗೆ ಪ್ರಮಾಣವನ್ನು ಶೇ.5ರಷ್ಟು ಇಳಿಕೆ ಮಾಡಲಾಗಿದೆ. ಹಾಲಿ ಶೇ.6ರಷ್ಟು ತೆರಿಗೆ ಇದೆ. ಝೂಮ್‌ ಕಾರ್‌, ಮೈಲ್ಸ್‌ನಮಥ ಕಾರುಗಳನ್ನು ಬಾಡಿಗೆಗೆ ನೀಡುವ ವರ್ಗಕ್ಕೆ ಶೇ.5 ತೆರಿಗೆ ವಿಧಿಸಲಾಗಿದೆ.

ಅಂತಾರಾಜ್ಯ ಬಸ್‌ ದರ ಇಳಿಕೆ: ಅಂತಾರಾಜ್ಯ ಬಸ್‌ ಸಂಚಾರಕ್ಕೆ ಸಂಬಂಧಿಸಿದಂತೆ ಜಿಎಸ್‌ಟಿ ಮಂಡಳಿ ಯಾವುದೇ ರೀತಿಯಲ್ಲಿ ತೆರಿಗೆ ವಿಧಿಸದಿರಲು ತೀರ್ಮಾನಿಸಿದೆ. ಇದು ಈ ಕ್ಷೇತ್ರಕ್ಕೆ ಹೆಚ್ಚಿನ ರೀತಿಯಲ್ಲಿ ನೆರವಾಗಲಿದೆ. ಪ್ರಯಾಣಿಕರ ಸಾಗಣೆಯಲ್ಲಿ ನಿರತವಾಗಿರುವ ಮಿನಿ ಬಸ್‌ ಮತ್ತು ಪಿಕ್‌-ಅಪ್‌ ವ್ಯಾನ್‌ಗಳಿಗೂ ತೆರಿಗೆ ವಿನಾಯಿತಿ ಇದೆ.

ಮೂರು ರಾಜ್ಯಗಳಲ್ಲಿ ಜವಳಿ ವ್ಯಾಪಾರಿಗಳ ಪ್ರತಿಭಟನೆ
ಮುಂದಿನ ತಿಂಗಳಿಂದ ಜಾರಿಯಾಗುವ ಜಿಎಸ್‌ಟಿಯಲ್ಲಿ ಜವಳಿ ಕ್ಷೇತ್ರಕ್ಕೆ ಶೇ.5ರಷ್ಟು ಮಾರಾಟ ತೆರಿಗೆ ವಿಧಿಸುವ ಪ್ರಸ್ತಾಪಕ್ಕೆ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರದ ನಿರ್ಧಾರ ಖಂಡಿಸಿ ರಾಜಸ್ಥಾನ, ಹರ್ಯಾಣ, ಪಂಜಾಬ್‌ಗಳಲ್ಲಿ ಬಟ್ಟೆ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು. ಜೂ.30ರ ವರೆಗೆ ಮುಷ್ಕರ ಮುಂದುವರಿಸುವುದಾಗಿ ಮೂರು ರಾಜ್ಯಗಳಲ್ಲಿನ ಬಟ್ಟೆ ವ್ಯಾಪಾರಿಗಳ ಒಕ್ಕೂಟ ನಿರ್ಧರಿಸಿದೆ.

ಜಿಎಸ್‌ಟಿ ಸವಾಲು ಎದುರಿಸಲು “ಮಿನಿ ಸಮರ ಕಣ’
ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಗೆ ಕ್ಷಣಗಣನೆ ಆರಂಭವಾಗಿದೆ. ಹೊಸ ತೆರಿಗೆ ನೀತಿ ಜಾರಿಯಾಗುತ್ತಿರುವಂತೆ ಅನೇಕ ಸವಾಲುಗಳು ಎದುರಾಗಲಿದ್ದು, ಅವುಗಳನ್ನು ಸಮರ್ಥವಾಗಿ ಎದುರಿಸಲು ಕೇಂದ್ರ ವಿತ್ತ ಸಚಿವಾಲಯದಲ್ಲಿ “ಮಿನಿ ಸಮರ ಕಣ’ವನ್ನು ರಚಿಸಲಾಗಿದೆ. ಇಲ್ಲಿ ಭಾರೀ ಸಂಖ್ಯೆ ಫೋನ್‌ ಲೈನ್‌ಗಳು, ಕಂಪ್ಯೂಟರ್‌ ವ್ಯವಸ್ಥೆಗಳನ್ನು ಅಳವಡಿಸಲಾಗಿದ್ದು, ಟೆಕ್‌ ಸ್ಯಾವಿ ಯುವಕರು “ಜಿಎಸ್‌ಟಿ ಹೋರಾಟ’ದಲ್ಲಿ ಭಾಗಿಯಾಗಲಿದ್ದಾರೆ. ಜಿಎಸ್‌ಟಿಗೆ ಸಂಬಂಧಿಸಿ ಯಾವುದೇ ಅನುಮಾನ, ಸಮಸ್ಯೆಗಳಿದ್ದರೆ ಆಯಾ ರಾಜ್ಯಗಳ ಅಧಿಕಾರಿಗಳು ಇಲ್ಲಿಗೆ ಕರೆ ಮಾಡಬಹುದು. ಕೂಡಲೇ ಅವರ ಅನುಮಾನಕ್ಕೆ ಉತ್ತರ ನೀಡಲಾಗುತ್ತದೆ ಎಂದು ಸಿಬಿಇಸಿ ಮುಖ್ಯಸ್ಥರಾದ ವನಜಾ ಎನ್‌. ಸರ್ನಾ ತಿಳಿಸಿದ್ದಾರೆ.

ಇಂದು ಸಂಸತ್‌ನಲ್ಲಿ ರಿಹರ್ಸಲ್‌
ಜೂ.30ರ ಮಧ್ಯರಾತ್ರಿ ಸಂಸತ್‌ನ ಸೆಂಟ್ರಲ್‌ ಹಾಲ್‌ನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದ್ದು, ಅದರ ಪೂರ್ವಾಭ್ಯಾಸ ಬುಧವಾರ ನಡೆಯಲಿದೆ. ರಾತ್ರಿ 10 ಗಂಟೆಗೆ ರಿಹರ್ಸಲ್‌ ನಡೆಯಲಿದ್ದು, ಕೇಂದ್ರ ಸಚಿವರಾದ ಅನಂತ್‌ಕುಮಾರ್‌, ಮುಖಾ¤ರ್‌ ಅಬ್ಟಾಸ್‌ ನಖೀÌ, ಎಸ್‌.ಎಸ್‌. ಅಹ್ಲುವಾಲಿಯಾ ಅಥವಾ ಕಾರ್ಯದರ್ಶಿ ರಾಜೀವ್‌ ಯಾದವ್‌ ಇದರ ಮೇಲ್ವಿಚಾರಣೆ ನಡೆಸಲಿದ್ದಾರೆ.

ಟಾಪ್ ನ್ಯೂಸ್

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

Bad weather: KKR team landed in Varanasi

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

18

Benjana Padavu: ನೇಣು ಬಿಗಿದು ಆತ್ಮಹತ್ಯೆ

Encounter in Kashmir:

ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಉಗ್ರರ ಹತ್ಯೆ

17-

Bantwala: ರಾಂಗ್‌ಸೈಡಿನಲ್ಲಿ ಬಂದು ಎರಡು ಬೈಕ್‌ಗಳಿಗೆ  ಢಿಕ್ಕಿ ಹೊಡೆದ ಲಾರಿ

Man shot a Cow on head twice

Manipur; ಹಸುವಿಗೆ ಗುಂಡಿಟ್ಟು ಕೊಂದ ಕ್ರೂರಿ!: ವ್ಯಾಪಕ ಆಕ್ರೋಶ

Rekha Jhunjhunwala lost Rs 800 crore in a single day!

Share Market; ರೇಖಾ ಜುಂಜುನ್‌ವಾಲಾಗೆ ಒಂದೇ ದಿನ 800 ಕೋಟಿ ರೂ. ನಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Encounter in Kashmir:

ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಉಗ್ರರ ಹತ್ಯೆ

Man shot a Cow on head twice

Manipur; ಹಸುವಿಗೆ ಗುಂಡಿಟ್ಟು ಕೊಂದ ಕ್ರೂರಿ!: ವ್ಯಾಪಕ ಆಕ್ರೋಶ

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

Karnataka BJP ಪೋಸ್ಟ್ ಡಿಲೀಟ್ ಮಾಡಲು ಟ್ವಿಟರ್ ಗೆ ಸೂಚಿಸಿದ ಚುನಾವಣಾ ಆಯೋಗ

8-panaji

Panaji: ಮತದಾರರನ್ನು ಸೆಳೆದ ಇಕೋ ಫ್ರೆಂಡ್ಲಿ ಮತಕೇಂದ್ರ

7-Panaji

Panaji: ಬಿಚೋಲಿಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ತೊಂದರೆ…

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

Bad weather: KKR team landed in Varanasi

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

18

Benjana Padavu: ನೇಣು ಬಿಗಿದು ಆತ್ಮಹತ್ಯೆ

Encounter in Kashmir:

ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಉಗ್ರರ ಹತ್ಯೆ

17-

Bantwala: ರಾಂಗ್‌ಸೈಡಿನಲ್ಲಿ ಬಂದು ಎರಡು ಬೈಕ್‌ಗಳಿಗೆ  ಢಿಕ್ಕಿ ಹೊಡೆದ ಲಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.