ಉ.ಪ್ರದೇಶದಲ್ಲಿ ಹೈ ಅಲರ್ಟ್‌, ಇಂಟರ್ನೆಟ್‌ ಸ್ಥಗಿತ


Team Udayavani, Apr 17, 2023, 7:55 AM IST

ಉ.ಪ್ರದೇಶದಲ್ಲಿ ಹೈ ಅಲರ್ಟ್‌, ಇಂಟರ್ನೆಟ್‌ ಸ್ಥಗಿತ

ಲಕ್ನೋ: ಮಾಧ್ಯಮ ಪ್ರತಿನಿಧಿಗಳು ಹಾಗೂ ಪೊಲೀಸರ ಮುಂದೆಯೇ ಗ್ಯಾಂಗ್‌ಸ್ಟರ್‌ ಆತಿಕ್‌ ಅಹ್ಮದ್‌ ಮತ್ತು ಸೋದರ ಅಶ್ರಫ್ನನ್ನು ಪಾಯಿಂಟ್‌ ಬ್ಲಾಂಕ್‌ ರೇಂಜ್‌ನಲ್ಲಿ ಹತ್ಯೆಗೈದ ಪ್ರಕರಣವು ಇಡೀ ಉತ್ತರಪ್ರದೇಶವನ್ನು ಬೆಚ್ಚಿಬೀಳಿಸಿದೆ.

ಘಟನೆಯ ಬೆನ್ನಲ್ಲೇ ಅಲರ್ಟ್‌ ಆಗಿರುವ ಪೊಲೀ ಸರು ಆತಿಕ್‌ನ ಮನೆಯಿ ರುವಂಥ ಪ್ರಯಾಗ್‌ರಾಜ್‌ನ ಚಕಿಯಾ ಪ್ರದೇಶದಲ್ಲಿ ಭದ್ರತೆ ಯನ್ನು ಬಿಗಿಗೊಳಿಸಿದ್ದು, ನಿರಂತರವಾಗಿ ಗಸ್ತು ತಿರುಗು ತ್ತಿದ್ದಾರೆ. ರಾಜ್ಯಾದ್ಯಂತ ಹೈ ಅ ಲರ್ಟ್‌ ಘೋಷಿಸಲಾಗಿದೆ. ಉತ್ತರಪ್ರದೇಶದ ಎಲ್ಲ ಜಿಲ್ಲೆಗಳಲ್ಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಭದ್ರತಾ ಕಾರಣಕ್ಕಾಗಿ ಪ್ರಯಾಗ್‌ರಾಜ್‌ನಾದ್ಯಂತ ಇಂಟರ್ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಐವರು ಐಪಿಎಸ್‌ ಅಧಿ ಕಾರಿಗಳನ್ನು ಪ್ರಯಾಗ್‌ರಾಜ್‌ಗೆ ಮೇಲ್ವಿಚಾರಣೆಗಾಗಿ ಕಳು ಹಿಸಿ ಕೊಡಲಾಗಿದೆ.

ರವಿವಾರ ಘಟನೆ ಬಗ್ಗೆ ಮಾಹಿತಿ ನೀಡಿದ ಪ್ರಯಾಗ್‌ರಾಜ್‌ ಪೊಲೀಸ್‌ ಆಯುಕ್ತ ರಮಿತ್‌ ಶರ್ಮಾ, “ಮೂವರು ಆರೋಪಿಗಳು ಕೂಡ ಮಾಧ್ಯಮ ಪ್ರತಿನಿಧಿಗಳ ಸೋ ಗಿನಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ. ಭದ್ರತಾ ಲೋಪ ಹಿನ್ನೆಲೆಯಲ್ಲಿ 17 ಮಂದಿ ಪೊಲೀಸ್‌ ಅಧಿ ಕಾರಿಗಳನ್ನು ಅಮಾನತು ಮಾಡಲಾಗಿದೆ’ ಎಂದಿದ್ದಾರೆ. ಆರೋ ಪಿಗಳು ಈ ಕೃತ್ಯಕ್ಕೆ ಝಿಗಾನಾ ನಿರ್ಮಿತ ಪಿಸ್ತೂ ಲುಗಳನ್ನು ಬಳಸಿದ್ದು, ಭಾರತದಲ್ಲಿ ಈ ಪಿಸ್ತೂಲಿಗೆ ನಿಷೇಧವಿದೆ. ಅಲ್ಲದೇ ಇದಕ್ಕೆ ತಲಾ 6ರಿಂದ 7 ಲಕ್ಷ ರೂ. ಬೆಲೆಯಿದೆ.

ನ್ಯಾಯಾಂಗ ತನಿಖೆಗೆ ಆದೇಶ: ಇದೇ ವೇಳೆ, ಅತೀಕ್‌-ಅಶ್ರಫ್ ಹತ್ಯೆಯ ತನಿಖೆಗಾಗಿ ಮೂವರು ಸದಸ್ಯರ ನ್ಯಾಯಾಂಗ ಆಯೋಗವನ್ನು ರಚಿಸಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆದೇಶ ಹೊರಡಿಸಿದ್ದಾರೆ. ಹೈಕೋರ್ಟ್‌ನ ನಿವೃತ್ತ ಜಡ್ಜ್ ಅರವಿಂದ ಕುಮಾರ್‌ ತ್ರಿಪಾಠಿ, ನಿವೃತ್ತ ನ್ಯಾಯಾಧೀಶ ಬೃಜೇಶ್‌ ಕುಮಾರ್‌ ಸೋನಿ ಮತ್ತು ನಿವೃತ್ತ ಡಿಜಿಪಿ ಸುಬೇಶ್‌ ಕುಮಾರ್‌ ಸಿಂಗ್‌ ಅವರೇ ಈ ಆಯೋಗದ ಸದಸ್ಯರು ಎಂದೂ ಯೋಗಿ ತಿಳಿಸಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, “ಕ್ರಿಮಿನಲ್‌ಗ‌ಳಿಗೆ ಈ ನೆಲದ ಕಾನೂನಿನಡಿ ಕಠಿನಾತಿಕಠಿನ ಶಿಕ್ಷೆಯನ್ನು ವಿಧಿಸಬೇಕು. ರಾಜಕೀಯ ಉದ್ದೇಶಕ್ಕಾಗಿ ಕಾನೂನು ಕೈಗೆತ್ತಿಕೊಳ್ಳುವುದು ಪ್ರಜಾಸತ್ತೆಗೆ ಅಪಾಯಕಾರಿ’ ಎಂದು ಹೇಳಿದೆ.

ಜಂಗಲ್‌ರಾಜ್‌: ಎಸ್‌ಪಿ ಅಧ್ಯಕ್ಷ ಅಖೀಲೇಶ್‌ ಯಾದವ್‌ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಉತ್ತರ ಪ್ರದೇಶದಲ್ಲಿ ಜಂಗಲ್‌ ರಾಜ್‌ ಇದೆ ಎಂದು ಕಿಡಿಕಾರಿದ್ದಾರೆ. ಪೊಲೀಸ್‌ ವಶದಲ್ಲಿಯೇ ಇಬ್ಬರು ಹತ್ಯೆಯಾಗಿರುವುದು ಹಲವು ಗಂಭೀರ ಲೋಪಗಳನ್ನು ಎತ್ತಿ ತೋರಿಸುತ್ತಿದೆ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಆರೋಪಿಸಿದ್ದಾರೆ.

ಅಪರಾಧ ಜಗತ್ತಿನಲ್ಲಿ ಹೆಸರು ಮಾಡಲು ಈ ಕೃತ್ಯ: ಮಾಧ್ಯಮ ಪ್ರತಿನಿಧಿಗಳ ಸೋಗಿನಲ್ಲಿ ಬಂದು ಸಮಾಜವಾದಿ ಪಕ್ಷದ ಮಾಜಿ ಸಂಸದ, ಗ್ಯಾಂಗಸ್ಟರ್‌ ಆತಿಕ್‌ ಅಹ್ಮದ್‌ ಮತ್ತು ಅಶ್ರಫ್ನನ್ನು ಗುಂಡಿಕ್ಕಿ ಕೊಲೆಗೈದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಲವಲೇಶ್‌ ತಿವಾರಿ(22), ಮೋಹಿತ್‌ ಅಲಿಯಾಸ್‌ ಸನ್ನಿ(23) ಮತ್ತು ಅರುಣ್‌ ಮೌರ್ಯ(18) ಎಂಬವರೇ ಕೊಲೆಗಡುಕರು. ಅಪರಾಧ ಜಗತ್ತಿನಲ್ಲಿ ತಮ್ಮ ಛಾಪು ಮೂಡಿಸಬೇಕು ಎಂಬ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾಗಿ ಇವರು ಹೇಳಿಕೊಂಡಿದ್ದಾರೆ. ಮೂವರ ವಿರುದ್ಧವೂ ಬೇರೆ ಬೇರೆ ಪ್ರಕರಣಗಳಲ್ಲಿ ಕೇಸು ದಾಖಲಾಗಿತ್ತು. ಅವರು ಮಾದಕವ್ಯಸನಿಗಳೂ ಆಗಿದ್ದರು. ಕುಟುಂಬದ ಜತೆಗೆ ಸಂಪರ್ಕ ಹೊಂದಿರಲಿಲ್ಲ. ಯಾವುದೇ ಉದ್ಯೋಗವನ್ನೂ ಮಾಡುತ್ತಿರಲಿಲ್ಲ. ಆತಿಕ್‌ ಅಹ್ಮದ್‌ ಗ್ಯಾಂಗ್‌ ಅನ್ನು ನಿರ್ಮೂಲನೆ ಮಾಡುವ ಮೂಲಕ ರಾಜ್ಯದಲ್ಲಿ ಹೆಸರು ಪಡೆಯಬೇಕು ಎಂಬ ಉದ್ದೇಶವನ್ನು ಇವರು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯವೆಸಗಿದ ಮೂವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಪ್ರಯಾಗ್‌ ರಾಜ್‌ನ ಕೋರ್ಟ್‌ ರವಿವಾರಆದೇಶ ನೀಡಿದೆ.

ಆರು ಮಂದಿ ಸಾವು: ಉತ್ತರ ಪ್ರದೇಶದಲ್ಲಿ ಬಹುಚರ್ಚಿತವಾಗಿರುವ ಉಮೇಶ್‌ ಪಾಲ್‌ ಹತ್ಯೆ ಪ್ರಕರಣದಲ್ಲಿ ಇದುವರೆಗೆ ಆರು ಮಂದಿ ಪೊಲೀಸರ ಜತೆಗಿನ ಗುಂಡಿನ ಚಕಮಕಿಯಲ್ಲಿ ಜೀವ ಕಳೆದುಕೊಂಡಿದ್ದಾರೆ. ಹತ್ತು ಮಂದಿ ವಿರುದ್ಧ ಎಫ್ಐಆರ್‌ನಲ್ಲಿ ಆರೋಪ ಮಾಡಲಾಗಿದೆ.

ಪತ್ರಕರ್ತರಿಗೆ ಮಾರ್ಗಸೂಚಿ: ಮೂವರು ಆರೋಪಿಗಳು ಮಾಧ್ಯಮ ಪ್ರತಿನಿಧಿಗಳಂತೆ ಕೆಮೆರಾ, ಮೈಕ್‌ನೊಂದಿಗೆ ಬಂದು ಅತೀಕ್‌-ಅಶ್ರಫ್ರನ್ನು ಕೊಲೆ ಮಾಡಿರುವ ಬೆನ್ನಲ್ಲೇ ಕೇಂದ್ರ ಸರಕಾರವು ಪತ್ರಕರ್ತರ ಸುರಕ್ಷತೆ ಮತ್ತು ಭದ್ರತೆಗಾಗಿ ಹೊಸ ಮಾರ್ಗಸೂಚಿ ಸಿದ್ಧಪಡಿಸಲು ಮುಂದಾಗಿದೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾರ್ಗದರ್ಶನದ ಮೇರೆಗೆ ಗೃಹ ಇಲಾಖೆಯು ಈ ಮಾರ್ಗಸೂಚಿ ಸಿದ್ಧಪಡಿಸಲಿದೆ.

ಯುಪಿಎ ಸರಕಾರಕ್ಕೆ ನೆರವಾಗಿದ್ದ ಒಂದು ಮತ
ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರಕ್ಕೆ ಅಸುನೀಗಿರುವ ಅತೀಕ್‌ ಅಹ್ಮದ್‌ನ ಒಂದು ಮತ ನೆರವಾಗಿ ಬಂದಿತ್ತು. 2008ರಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಅಮೆರಿಕ-ಭಾರತ ಪರಮಾಣು ಒಪ್ಪಂದ ಬೇಕೋ ಬೇಡವೋ ಎಂಬ ನಿರ್ಣಯದ ವಿರುದ್ಧ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಪರ ಮತ ಹಾಕಲು ಆತನನ್ನು ಬಿಗಿ ಭದ್ರತೆಯಲ್ಲಿ ಸಂಸತ್‌ಗೆ ಕರೆತರಲಾಗಿತ್ತು. ಆ ಸಂದರ್ಭದಲ್ಲಿ ಆತ ಸಮಾಜವಾದಿ ಪಕ್ಷದಿಂದ ಫ‌ೂಲ್‌ಪುರ್‌ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ. ಈ ಬಗ್ಗೆ ಹಿರಿಯ ಲೇಖಕ ರಾಜೇಶ್‌ ಸಿಂಗ್‌ ಬರೆದಿರುವ “ಬಾಹುಬಲೀಸ್‌ ಆಫ್ ಇಂಡಿಯನ್‌ ಪಾಲಿಟಿಕ್ಸ್‌: ಫ್ರಂ ಬುಲೆಟ್‌ ಟು ಬ್ಯಾಲೆಟ್‌’ (Baahubalis of Indian Politics: From Bullet to Ballot) ಎಂಬ ಕೃತಿಯಲ್ಲಿ ಉಲ್ಲೇಖೀಸಲಾಗಿದೆ.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರೇ ಸಂವಿಧಾನವನ್ನೂ ರೂಪಿಸಿದ್ದಾರೆ. ಈ ಸಂವಿಧಾನ ಮತ್ತು ನಮ್ಮ ನೆಲದ ಕಾನೂನಿಗೆ ಶ್ರೇಷ್ಠವಾದ ಸ್ಥಾನಮಾನವಿದೆ. ಈ ಸಂವಿಧಾನದೊಂದಿಗೆ ಆಟವಾಡಲು ಯಾರಿಗೂ ಬಿಡಬಾರದು.
– ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಟಾಪ್ ನ್ಯೂಸ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

1-qwewe

Odisha ಜನರು ನಿಂದನೀಯ ಭಾಷೆ ಮೆಚ್ಚಿಕೊಳ್ಳುವುದಿಲ್ಲ:ಬಿಜೆಪಿಗೆ ಪಟ್ನಾಯಕ್ ತಿರುಗೇಟು

6-rabakavi

Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minchu

Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು

Swati Maliwal Arvind Kejriwal’s aide repeatedly kicked her in stomach

AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್

Why not hold a press conference? Prime Minister Modi replied

PM Modi ಪತ್ರಿಕಾಗೋಷ್ಠಿ ಯಾಕೆ ನಡೆಸುವುದಿಲ್ಲ? ಉತ್ತರಿಸಿದ ಪ್ರಧಾನಿ ಮೋದಿ

Mumbai Hoarding Collapse; The main accused caught by the police in Rajasthan

Mumbai Hoarding Collapse; ರಾಜಸ್ಥಾನದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಪ್ರಮುಖ ಆರೋಪಿ

covid

Covishield ಲಸಿಕೆಯಿಂದ ಮತ್ತೊಂದು ಸೈಡ್‌ಎಫೆಕ್ಟ್!

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-qwewqewqe

Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

1——-qweweqw

Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.