ನನ್ನ ವಜಾ ಮಾಡ್ತಾರೆ ಎಂದಿದ್ದ ಮಿಸ್ತ್ರಿ
Team Udayavani, Oct 23, 2017, 7:50 AM IST
ಹೊಸದಿಲ್ಲಿ: “ನಾನು ವಜಾಗೊಳ್ಳಲಿದ್ದೇನೆ.’ ಹೀಗೆಂದು ಟಾಟಾ ಸನ್ಸ್ನ ಅಧ್ಯಕ್ಷರಾಗಿದ್ದ ಸೈರಸ್ ಮಿಸ್ತ್ರಿ ಪತ್ನಿ ರೊಹಿಕಾಗೆ 2016ರ ಅ.24 ರಂದು ಸಂದೇಶ ಕಳುಹಿಸಿದ್ದರು. “ನನ್ನನ್ನು ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬಹುದು ಅಥವಾ ರಾಜೀನಾಮೆ ಸಲ್ಲಿಸುವಂತೆ ಸೂಚಿಸಬಹುದು’ ಎಂದು ಆ ದಿನ ಸಭೆ ನಡೆಯುವ ಕೆಲ ಗಂಟೆಗಳ ಮೊದಲು ಮಿಸ್ತ್ರಿ ಈ ಸಂದೇಶ ಕಳುಹಿಸಿದ್ದರು. ಹೀಗೆಂದು ಟಾಟಾ ಸನ್ಸ್ನ ಗ್ರೂಪ್ ಎಕ್ಸಿಕ್ಯೂಟಿವ್ ಕೌನ್ಸಿಲ್ನಲ್ಲಿ ಇದ್ದ ನಿರ್ಮಾಲಯ ಕುಮಾರ್ ಬ್ಲಾಗ್ನಲ್ಲಿ ಬರೆದಿರುವ ಲೇಖನದಲ್ಲಿ ಹೇಳಿಕೊಂಡಿದ್ದಾರೆ.
“ನಿತಿನ್ ನೋಹಿìಯಾ ಸೈರಸ್ ಅವರನ್ನು ಉದ್ದೇಶಿಸಿ, ನಿಮ್ಮ ಮತ್ತು ರತನ್ ನಡುವಿನ ಬಾಂಧವ್ಯ ಉತ್ತಮವಾಗಿಲ್ಲ’ ಎಂದು ಮಾತು ಆರಂಭಿಸಿದರು. ಆಗ ಮಿಸ್ತ್ರಿ, ನೀವು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹೇಳಿದರು ಎಂದು ಕುಮಾರ್ ಬರೆದಿದ್ದಾರೆ.