Hurun Report: ಮುಂಬಯಿ ಏಷ್ಯಾದ ಹೊಸ ಬಿಲಿಯನೇರ್ಸ್ ರಾಜಧಾನಿ
ಬೀಜಿಂಗ್ ಹಿಂದಿಕ್ಕಿದ ಭಾರತದ ವಾಣಿಜ್ಯ ನಗರಿ
Team Udayavani, Mar 26, 2024, 11:47 PM IST
ಹೊಸದಿಲ್ಲಿ: 92 ಶತಕೋಟ್ಯಧಿಪತಿಗಳನ್ನು ಹೊಂದಿರುವ ಮುಂಬಯಿ, ಏಷ್ಯಾದ ಹೊಸ “ಬಿಲಿಯನೇರ್ ಗಳ ರಾಜಧಾನಿ’ಯಾಗಿ ಹೊರ ಹೊಮ್ಮಿದೆ. ಈ ಮೂಲಕ ಪಟ್ಟಿಯಲ್ಲಿ ಬೀಜಿಂಗ್ ನಗರವನ್ನು ಹಿಂದಿಕ್ಕಿದೆ.
ಹುರುನ್ ಸಂಶೋಧನ ಸಂಸ್ಥೆಯ ವರದಿ ಪ್ರಕಾರ, 271 ಶತಕೋಟ್ಯಧಿ ಪತಿಗಳನ್ನು ಹೊಂದಿರುವ ಭಾರತ, ವಿಶ್ವದಲ್ಲೇ 3ನೇ ಸ್ಥಾನದಲ್ಲಿದೆ. ಈ ವರ್ಷ ಹೊಸದಾಗಿ 26 ಬಿಲಿಯನೇರ್ಗಳು ಮುಂಬಯಿಯಿಂದ ಹೊರ ಹೊಮ್ಮಿದ್ದಾರೆ. ಈ ಮೂಲಕ ವಿಶ್ವದಲ್ಲಿ ಹೆಚ್ಚು ಶತಕೋಟ್ಯಧಿಪತಿಗಳನ್ನು ಹೊಂದಿ ರುವ ಪಟ್ಟಿಯಲ್ಲಿ ಮುಂಬಯಿ 3ನೇ ಸ್ಥಾನ ಪಡೆದಿದ್ದು, ಏಷ್ಯಾದಲ್ಲಿ ಮೊದಲ ಸ್ಥಾನ ಪಡೆದಿದೆ. ಹೊಸದಿಲ್ಲಿ ಮೊದಲ ಬಾರಿಗೆ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಈ ವರ್ಷ ಭಾರತದಲ್ಲಿ ಹೊಸದಾಗಿ 94 ಬಿಲಿಯನೇರ್ಗಳು ಉದಯಿಸಿದ್ದು, ವಿಶ್ವದಲ್ಲೇ ಭಾರತ 2ನೇ ಸ್ಥಾನದ ಲ್ಲಿದೆ. ಅಮೆರಿಕ ಮೊದಲ ಸ್ಥಾನದಲ್ಲಿದೆ.