ಪಾಕಿಸ್ಥಾನದ ಮೇಲೆ ಭಾರತದ ಟೊಮೇಟೊ ಬಾಂಬ್!
Team Udayavani, Feb 24, 2019, 12:30 AM IST
ಪುಲ್ವಾಮಾ ದಾಳಿ ಅನಂತರ ಭಾರತದ ಹಲವು ರಾಜ್ಯಗಳ ರೈತರು ಪಾಕಿಸ್ಥಾನಕ್ಕೆ ಟೊಮೇಟೊ ರಫ್ತು ಮಾಡಲು ನಿರಾಕರಿಸಿದ್ದು, ಈಗ ಪಾಕಿಸ್ಥಾನದಲ್ಲಿ ಟೊಮೇಟೊ ಕೊರತೆ ಕಾಣಿಸಿಕೊಂಡಿದೆ ಎನ್ನಲಾ ಗಿದೆ. ಭಾರತದ ಟೊಮೇಟೋಗೆ ಪಾಕಿಸ್ಥಾನದಲ್ಲಿ ಭಾರಿ ಬೇಡಿಕೆ ಯಿರುವುದರಿಂದ ಪಾಕಿಸ್ಥಾನದಲ್ಲಿ ಬೆಲೆ ಏರಿಕೆಯಾಗಿದೆ.
ಇದರ ಬಗ್ಗೆ ಪಾಕಿಸ್ಥಾನದ ಟಿವಿ ಚಾನೆಲ್ಗಳಲ್ಲಿ ಭಾರಿ ಚರ್ಚೆಯೂ ನಡೆದಿದೆ. ಅಷ್ಟೇ ಅಲ್ಲ, ಕೆಲವು ತಜ್ಞರು ಟೊಮೇಟೊ ಸ್ವಾವಲಂಬನೆಗೆ ಕಾನೂನು ತರಬೇಕು ಎಂದಿದ್ದಾರೆ!
ಪುಲ್ವಾಮಾ ದಾಳಿ ಅನಂತರ, ಮಧ್ಯಪ್ರದೇಶದ ಝಬುವಾದಲ್ಲಿ ಭಾರಿ ಪ್ರಮಾಣದಲ್ಲಿ ಟೊಮೇಟೊ ಬೆಳೆಯುತ್ತಿದ್ದು,
ಇಲ್ಲಿನ ರೈತರು ಪಾಕಿಸ್ಥಾನಕ್ಕೆ ರಫ್ತು ಮಾಡಲು ನಿರಾಕರಿಸಿದ್ದಾರೆ. ಆದರೆ ಈಗಲೂ ಅಲ್ಪ ಪ್ರಮಾಣದಲ್ಲಿ ಟೊಮೇಟೊ ರಫ್ತಾಗು ತ್ತಿದ್ದರೂ ಊಹಾಪೋಹದಿಂದಾಗಿಯೇ ಪಾಕ್ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ.