4 ತಿಂಗಳ ಕನಿಷ್ಠಕ್ಕೆ ಹಣದುಬ್ಬರ
Team Udayavani, Sep 15, 2018, 11:52 AM IST
ಹೊಸದಿಲ್ಲಿ: ಸಗಟು ಹಣದುಬ್ಬರ ದರ 4ತಿಂಗಳ ಕನಿಷ್ಠಕ್ಕೆ ತಲುಪಿದೆ. ಶುಕ್ರವಾರ ಬಿಡುಗಡೆಯಾದ ಮಾಹಿತಿ ಪ್ರಕಾರ, ಅದರ ಪ್ರಮಾಣ ಶೇ.4.53 ಆಗಿದೆ. ಆದರೆ ಹೆಚ್ಚಾಗುತ್ತಿರುವ ತೈಲೋತ್ಪನ್ನಗಳ ಬೆಲೆ, ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದಾಗಿ ಈ ಬೆಳವಣಿಗೆ ಕೇವಲ ತಾತ್ಕಾಲಿಕ ಎಂದು ಮಾರುಕಟ್ಟೆ ವಿಶ್ಲೇಷಕರು ಎಚ್ಚರಿಸಿದ್ದಾರೆ. ಆರ್.ಬಿ.ಐ.ನ ಮುಂದಿನ ತ್ತೈಮಾಸಿಕ ಸಾಲ ನೀತಿ ಪರಿಶೀಲನಾ ಸಭೆ ಅ.5ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಬಡ್ಡಿದರ ಪರಿಷ್ಕರಣೆ ನಡೆಯುವ ಸಾಧ್ಯತೆಯೂ ಇದೆ.