ಬಾಲಿವುಡ್ನ ವಿಕ್ಕಿ ಕೌಶಲ್ ನಟನೆಯ ಸಿನಿಮಾಕ್ಕೆ ಸ್ಕೂಟರ್ ಮಾಲೀಕನ ವಿರೋಧ
Team Udayavani, Jan 2, 2022, 10:15 PM IST
ಮುಂಬೈ: ಬಾಲಿವುಡ್ನ ವಿಕ್ಕಿ ಕೌಶಲ್ ಮತ್ತು ಸಾರಾ ಅಲಿಖಾನ್ ನಟಿಸುತ್ತಿರುವ ಚಿತ್ರವೊಂದರಲ್ಲಿ ನನ್ನ ಸ್ಕೂಟರ್ನ ನೋಂದಣಿ ಸಂಖ್ಯೆ ಬಳಸಲಾಗಿದೆಯೆಂದು ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.
ಬಾಲಿವುಡ್ನ ಚಿತ್ರಕ್ಕಾಗಿ ಮಧ್ಯಪ್ರದೇಶದ ಹಲವು ಕಡೆ ಚಿತ್ರೀಕರಣ ನಡೆಸಲಾಗಿದೆ. ಅದರಲ್ಲಿ ವಿಕ್ಕಿ, ಸಾರಾಳನ್ನು ಬೈಕ್ನಲ್ಲಿ ಕರೆದುಕೊಂಡು ಹೋಗುವ ದೃಶ್ಯದ ಫೋಟೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಆ ಸ್ಕೂಟರ್ಗೆ ನನ್ನ ಅನುಮತಿ ಪಡೆಯದೇ ನನ್ನ ಬೈಕಿನ ನೋಂದಣಿ ಸಂಖ್ಯೆ ಬಳಸಲಾಗಿದೆ ಎಂದು ಜೈಸಿಂಗ್ ಯಾದವ್ ಎಂಬವರು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ಕರಾವಳಿಯ ಶ್ರದ್ಧಾ ಕೇಂದ್ರಗಳಲ್ಲಿ ಭಕ್ತರ ಸಂಗಮ