ರೈಲ್ವೆ ಟಿಕೆಟ್ ಇ-ಬುಕಿಂಗ್ ನಿಯಮ ಬದಲಾವಣೆ
Team Udayavani, Apr 17, 2018, 10:00 AM IST
ಹೊಸದಿಲ್ಲಿ : ಇತ್ತೀಚೆಗಷ್ಟೇ, ತತ್ಕಾಲ್ ಮೂಲಕ ರೈಲು ಟಿಕೆಟ್ ಬುಕ್ ಮಾಡುವ ನಿಯಮಗಳಲ್ಲಿ ಬದಲಾವಣೆ ತಂದಿರುವ ರೈಲ್ವೆ ಇಲಾಖೆ, ಇದೀಗ ಅಂತರ್ಜಾಲದ ಮೂಲಕ ರೈಲ್ವೆ ಟಿಕೆಟ್ ಮುಂಗಡ ಬುಕ್ಕಿಂಗ್ನ ನಿಯಮಾವಳಿಗಳಲ್ಲೂ ಬದಲಾವಣೆ ತಂದಿದೆ. ಮುಂಗಡ ಟಿಕೆಟ್ ಬುಕಿಂಗ್ನಲ್ಲಿ ಅಕ್ರಮಗಳೂ ಹೆಚ್ಚಾಗುತ್ತಿರುವುದರಿಂದ ಇವುಗಳಿಗೆ ತಡೆ ಹಾಕಲು ಕೇಂದ್ರ ಸರಕಾರ ಈ ನಿರ್ಧಾರ ಕೈಗೊಂಡಿದೆ. ಪ್ರಯಾಣಕ್ಕಿಂತ 120 ದಿನ ಮುಂಚೆಯೇ ಟಿಕೆಟ್ ಬುಕಿಂಗ್ ಮಾಡಬಹುದು. ಒಂದು ಯೂಸರ್ ಐಡಿಯಿಂದ ಕೇವಲ ಆರು ಟಿಕೆಟ್ಗಳಿಗೆ ಮಾತ್ರ ಅವಕಾಶವಿರುತ್ತದೆ. ಆಧಾರ್ ಸಂಖ್ಯೆ ಪರಿಶೀಲನೆಗೊಳಪಟ್ಟಿರುವ ಪ್ರಯಾಣಿಕರು ತಿಂಗಳಲ್ಲಿ 12 ಟಿಕೆಟ್ ಬುಕ್ ಮಾಡಬಹುದು.
ಇ-ಬುಕಿಂಗ್ನ ಆರಂಭಿಕ ಸೇವಾವಧಿಯಲ್ಲಿ (ಬೆ. 8ರಿಂದ 10 ಗಂಟೆ) ಎರಡು ಟಿಕೆಟ್ ಮಾತ್ರ ಬುಕಿಂಗ್ಗೆ ಅವಕಾಶವಿರುತ್ತದೆ. ಯೂಸರ್ ನೇಮ್, ಇ ಮೇಲ್ ವಿಳಾಸ, ಮೊಬೈಲ್ ಸಂಖ್ಯೆ, ಚೆಕ್ ಬಾಕ್ಸ್ ಎಲ್ಲವೂ ಮುಗಿದ ನಂತರ ಸೆಕ್ಯುರಿಟಿ ಪ್ರಶ್ನೆಗೆ ಉತ್ತರಿಸಬೇಕು. ಆನ್ಲೈನ್ ಮುಂಗಡ ಬುಕಿಂಗ್ ಆರಂಭವಾದ ಮೊದಲ ಅರ್ಧಗಂಟೆಯಲ್ಲಿ ಅಧಿಕೃತ ಏಜೆಂಟರಿಗೆ ಟಿಕೆಟ್ ಬುಕಿಂಗ್ ಗೆ ಅವಕಾಶವಿರುವುದಿಲ್ಲ ಕ್ಯಾಪ್ಚಾ ತುಂಬಲು 5 ಸೆಕೆಂಡ್ ಮಾತ್ರ ಅವಕಾಶ. ಹಣ ಪಾವತಿಗೆ 10 ಸೆಕೆಂಡ್ ಕಾಲಾವಧಿಯಿದ್ದು, ಒನ್ ಟೈಮ್ ಪಾಸ್ವರ್ಡ್ ಕಡ್ಡಾಯ ಮಾಡಲಾಗಿದೆ. ತತ್ಕಾಲ್ ಟಿಕೆಟ್ಗಳನ್ನು ಪ್ರಯಾಣಕ್ಕೆ ಒಂದು ದಿನ ಮುಂಚಿತವಾಗಿ ಬುಕ್ ಮಾಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ